ಮತ್ತೊಂದಿಷ್ಟು ಹನಿಗಳು

ಮತ್ತೊಂದಿಷ್ಟು ಹನಿಗಳು

ಕವನ

ನಾನು ಯಾರನ್ನು

ನನ್ನಷ್ಟಕ್ಕೇ ನಂಬೆನು

ಸಾವ ದಿನವು !

 

ಕಲ್ಲಿಗೂ ಜೀವ

ಬರುತ್ತದೆ ನೋಡಯ್ಯಾ

ಬಿಸಿಯಾದಾಗ !

 

ಉಟ್ಟ ಬಟ್ಟೆಗೆ

ಇರುವ ಬೆಲೆಯಿಂದು

ಮನುಜಗಿಲ್ಲ !

 

ರಸ್ತೆಯಲ್ಲಿಯೆ

ಉಗಿಯುತ್ತಾರೆ ಜನ

ತಾಂಬೂಲವನ್ನು !

 

ಕಷ್ಟದಲ್ಲಿಹ

ಜನರಿಗೆ ಸ್ಪಂಧಿಸಿ

ಜಾಣರಾಗಿರಿ !

 

ಬಾಳು ಎಂದರೆ

ದಾರಿಯಲ್ಲಿ ಸಿಗುವ

ಕಲ್ಲು ಮುಳ್ಳುವು !

 

ಚಿಂತೆಯಿಲ್ಲದೆ

ಸಾಗಿದವನಿಗಂತು

ನಿಂತಲ್ಲೆ ನಿದ್ರೆ !

 

ನಾನು ಕೋತಿಯು

ಸಂಸಾರ ನಡೆಸುವ

ಜವಾಬ್ದಾರಿಲಿ !

 

ಕೋಪ ತಾಪವು

ಸಲ್ಲದೆಂದಿಗು ತಿಳಿ

ಸ್ನೇಹಿಯಾಗೆಂದು !

 

ವಿಮರ್ಶೆಯಲಿ

ಕವಿ ಬೆಳಗಬೇಕು

ಬಾಡ ಬಾರದು !

 

ಭಟ್ಟಂಗಿಗಳ

ಬರಹಗಳ ನಡುವೆ

ನಾವಿರುವೆವು !

 

ಬರೆದುದೆಲ್ಲವು

ಸಾಹಿತ್ಯವಲ್ಲ, ಸತ್ಯ

ಕಲಿಯಬೇಕು !

 

ಕೃತಿ ಚೌರ್ಯದ

ಕರಾಮತ್ತಿನ ನಡೆ

ಪ್ರಶಸ್ತಿ ಕಡೆ !

 

***

ಹೀಗೆ

ಹಲವಾರು

ವಿಮರ್ಶಕರು

ಸಾಹಿತ್ಯವ ಕೊಂದಿಲ್ಲ

ಬದಲಿಗೆ

ಬಾಡಿಸಿದ್ದಾರೆ !

***

ಮುಕ್ತಕ

ಉದಯಿಸಿದ ಸೂರ್ಯನಂತಿರುತಲೇ ನೀನಿಂದು

ಹದವಿರುವ ಭೂಮಿಯನು ಉಳುಮೆಯನು ಮಾಡು|

ಕದವನ್ನು ಹಾಕದೆಯೆ ಅತಿಥಿಯನು ಸತ್ಕರಿಸು

ಮುದುಕನಾಗುವ ಮೊದಲು --- ಛಲವಾದಿಯೆ||

***

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್