ಮತ್ತೊಮ್ಮೆ ಗಾಂಧಿ ನೆನಪಿಗೆ..!

ಮತ್ತೊಮ್ಮೆ ಗಾಂಧಿ ನೆನಪಿಗೆ..!

ಕವನ

ಮತ್ತೊಮ್ಮೆ ಗಾಂಧಿ

ನೆನಪಿಗೆ ಬಂದ

ಅಹಿಂಸೆಯೇ ಗೆಲುವೆಂದ;

ಬೆತ್ತಲಿನ ಮಡಿಯ ಅಚ್ಚ

ಬಿಳುಪಿನ ವಸ್ತ್ರದಿ  ನೊಡೋಕೆ ಚಂದ;

 

ದಟ್ಟ ದರಿದ್ರರ ಬಾಳಿಗೆ

ಹೊಸ ಆಶಾಕಿರಣ ತಂದ

ನಾವೆಲ್ಲರೂ ಸಮಾನರೆಂದ;

ಸಕಲರನ್ನು ಗೌರವಿಸಿ ಶತೃಗಳನ್ನು

ಕ್ಷಮಿಸಿ ಸಹೃದತೆಯ ಮೆರೆಯಿರೆಂದ;

 

ದೀನ ದಲಿತರ ಅಸೂಯಗೆ

ಕೊನೆಯೇ ಇಲ್ಲವೆಂದು

ಅಸ್ಪೃಶ್ಯತೆ ಶಾಪವೆಂದ;

ನಾವೆಲ್ಲರೂ ಭಾರತೀಯರು

ಧರ್ಮ ಜಾತಿ ಮೇಲು ಕೀಳು

ಕೊನೆಗಾಣಿಸಬೇಕೆಂದ:

 

ಬುದ್ಧ- ಬಸವಣ್ಣ, ಗಾಂಧಿ- ಅಂಬೇಡ್ಕರ್ 

ಸಮಾನತೆಯ ಹರಿಕಾರರೆಂದ, 

ಹರಿದು ಹಂಚಿ ಹೋದ ಮನುಜರೆದೆಯಲಿ

ಮಾನವೀಯತೆ ಬೆಳೆಯಲಿ ಎಂದ;

 

ದೇಶದಲ್ಲಿ ಅಬಲೆಯರ ಕಗ್ಗೊಲೆ

ಸಹಿಸದಿರಿ ಎಂದ ಸರ್ಕಾರವೇ

ಕಣ್ಮುಚ್ಚಿ ಕುಳಿತರೇ ಬಾಯಿ

ಮುಚ್ಚಿಕೊಂಡಿರದಿರಿ ಎಂದ

ಹಿಂಸೆಗೆ ಪ್ರತಿಹಿಂಸೆ ಔಷದವಲ್ಲವೆಂದ;

 

ಮತ್ತೊಮ್ಮೆ ಗಾಂಧಿ ನೆನಪಿಗೆ

ಬಂದ ಹಿಂಸೆಯ ಆರಾಧಕರ

ಶುಭಾಶಯ ಕೇಳೋದೆ ಚಂದ;

ಹಾರ ತುರಾಯಿಯೊಂದಿಗೆ ಸಮಾಧಿ 

ಮುಂದೆ  ಕಪಟಿಗಳು ದ್ಯಾನಸಕ್ತನಂತೆ 

ಕೈ ಮುಗಿಯೋದು ನೋಡೋಕೆ ಚಂದ;

 

ಮತ್ತೊಮ್ಮೆ ಗಾಂಧಿ

ನೆನಪಿಗೆ ಬಂದ;

ಮುಂದಿನ ಹುಟ್ಟು ಹಬ್ಬಕ್ಕಾದರೂ

ಭಾರತೀಯರ ಬದುಕನ್ನು ಸಿಹಿ

ಮಾಡಿರೆಂದು ಹೋದ.

-ಡಾ.ದಿವಾಕರ್ ಡಿ. ಮಂಡ್ಯ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್