ಮದುಮೇಹ ಹಾಗೂ ಕಿಡ್ನಿ ವೈಫಲ್ಯ.

ಮದುಮೇಹ ಹಾಗೂ ಕಿಡ್ನಿ ವೈಫಲ್ಯ.

 

 ಮಧುಮೇಹ ಹಾಗೂ ಕಿಡ್ನಿ ವೈಫಲ್ಯ

ಮಧುಮೇಹ ಆಥವಾ ಸಕ್ಕರೆ ಕಾಯಿಲೆಯವರಿಗೆ, ಮೂತ್ರಪಿಂಡ (ಕಿಡ್ನಿ)ದ ಸಮಸ್ಯೆಗಳ ಬಗ್ಗೆ ಅರಿವು ಅವಶ್ಯಕ. ಅನೇಕರು ಅಂತರ್ಜಾಲದಿಂದ ಸಾಕಷ್ಟು ಮಾಹಿತಿಯನ್ನು ತಿಳಿಯುವರು ಹಾಗೂ ಇನ್ನುಳಿದವರು ತಮ್ಮ ವೈದ್ಯರ ಬಳಿ ಅನೇಕ ಪ್ರಶ್ನೆಗಳನ್ನು ಕೇಳುತ್ತಾ, ವಿಚಾರವನ್ನು ಅರಿಯುವರು, ಯಾವುದೇ ಕಾಯಿಲೆ ಬಗ್ಗೆ ಅರೆ, ¨ರೆ ಮಾಹಿತಿಗಿಂತ ಸರಿಯಾದ ಮಾಹಿತಿ ಪಡೆದು, ಕಾಯಿಲೆಯನ್ನು ನಿಯಂತ್ರಣದಲ್ಲಿಡುವುದಾಗಲೀ, ಸೂಕ್ತ ಚಿಕಿತ್ಸೆ ಪಡೆಯುವುದಾಗಲೀ ಬುದ್ಧಿವಂತರ ಲಕ್ಷಣ, ಮಧುಮೇಹದವರಲ್ಲಿ ಕಿಡ್ನಿ ಸಮಸ್ಯೆ ಕುರಿತಾದ ಅನೇಕ ಪ್ರಶ್ನೋತ್ತರಗಳು ಇಲ್ಲಿವೆ.

·                    ಮಧುಮೇಹದವರಲ್ಲಿ ಕಿಡ್ನಿ ಸಮಸ್ಯೆಗೆ ಕಾರಣವೇನು ?

ಸರಿಯಾಗಿ ಇದೇ ಕಾರಣ ಎಂದು ಹೇಳಲಾಗದಿದ್ದರೂ, ಅನುವಂಶಿಕ ಕಾರಣಗಳು, ರಕ್ತದ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡದಿರುವುದು, ಹಾಗೂ ಜೊತೆಗೆ ಅಧಿಕ ರಕ್ತದೊತ್ತಡ ಹೊಂದಿರುವುದು, ಕಿಡ್ನಿಯ ಸಮಸ್ಯೆಗಳಿಗೆ ಕಾರಣ.

·                    ನನಗೆ ಸಕ್ಕರೆ ಕಾಯಿಲೆ ಇದೆ. ನನಗೆ ಕಿಡ್ನಿ ಸಮಸ್ಯೆಯುಂಟಾಗುತ್ತದೆ ಎಂಬುದನ್ನು ತಿಳಿಯುವುದು ಹೇಗೆ ?

ರಕ್ತದಲ್ಲಿ ಅಧಿಕ ಗ್ಲೂಕೋಸ್‍ಅಂಶ,ಅತ್ಯಧಿಕ ರಕ್ತದೊತ್ತಡವಿದ್ದು, ನೀವು ತಂಬಾಕು ಸೇವಿಸುತ್ತಿದ್ದರೆ (ಸಿಗರೇಟ್, ಬೀಡಿ………ಸೇವನೆ) ನಿಮ್ಮ ಕುಟುಂಬದ ಸದಸ್ಯರು ಮಧು ಮೇಹದಿಂದುಂಟಾದ ಕಿಡ್ನಿ ಸಮಸ್ಯೆಯಿಂದ ಬಳಲಿದ್ದರೆ, ನಿಮಗೂ ಸಹ ಮಧುಮೇಹದಿಂದುಟಾಗುವ ಕಿಡ್ನಿ ಸಮಸ್ಯೆ ಸಂಭವ ಹೆಚ್ಚು ?

·                    ಮಧುಮೇಹದಲ್ಲಿ ಎರಡು ವಿಧಗಳಿವೆಯಲ್ಲ : ಟೈಪ್ 1 ಹಾಗೂ ಟೈಪ್ 2 ಇವರಲ್ಲಿ ಯಾರಿಗೆ ಕಿಡ್ನಿ ಸಮಸ್ಯೆ ಹೆಚ್ಚು ?

ಎರಡೂ ರೀತಿಯ ಡಯಾಬಿಟಿಸ್‍ನವರಿಗೆ ಸಮಪ್ರಮಾಣದಲ್ಲಿ ಕಿಡ್ನಿ ಸಮಸ್ಯೆ ಬರಬಹುದು.  ಆದರೆ ಕಿಡ್ನಿ ಫೇಲ್ಯೂರ್ -ವೈಫಲ್ಯ

ಆಗಿ ಡಯಾಲಿಸಿಸ್ ಅಥವಾ ಕಿಡ್ನಿ ಕಸಿ ಮಾಡಬೇಕಾದ ಗಂಭೀರ ಪರಿಸ್ಥಿತಿ ಹೆಚ್ಚಾಗಿ ಸಂಭವಿಸುವುದು ಟೈಪ್ 1, ಡಯಾಬಿಟಿಸ್ ಇರುವವರಲ್ಲಿ ಹೆಚ್ಚು.

·                    ಮಧು ಮೇಹಿಗಳು, ಕಿಡ್ನಿಯ ಸಮಸ್ಯೆ ಉಂಟಾಗುತ್ತಿದೆ ಎಂಬುದನ್ನು ತಿಳಿಯುವುದು ಹೇಗೆ ? ರಕ್ತ ಹಾಗೂ ಮೂತ್ರ ಪರೀಕ್ಷೆಯಿಂದ ಇದು ಸಾಧ್ಯವೇ ?

ಹೌದು. ಆದರೆ, ದಿನ ನಿತ್ಯ ನಡೆಸುವ ಸಾಧಾರಣ ಮೂತ್ರ ಪರೀಕ್ಷೆಯಿಂದ ಇದನ್ನು ಗುರ್ತಿಸಲಾಗುವುದಿಲ್ಲ. ‘ಮೈಕ್ರೋಆಲ್‍ಬ್ಯುಮಿನ್‍ಯೂರಿಯ’ ಎಂಬ ಮೂತ್ರ ಪರೀಕ್ಷೆಯಿಂದ ಕಿಡ್ನಿ ಸಮಸ್ಯೆಯನ್ನು ಅತೀ ಶೀಘ್ರದಲ್ಲಿ ಶುರುವಿನ ಹಂತದಲ್ಲೇ ಕಂಡು ಹಿಡಿಯಬಹುದು.

ಕಿಡ್ನಿಯಲ್ಲಿ ಸಮಸ್ಯೆ ಶುರುವಾದಾಗ, ಮೂತ್ರದಲ್ಲಿ ಒಂದು ರೀತಿಯ ಆಲ್‍ಬ್ಯುಮಿನ್ ಎಂಬ ಪ್ರೋಟೀನ್ ಅಂಶವನ್ನು ಅದು ಹೊರ ಹಾಕಲು ಶುರು ಮಾಡುವುದು. ಇದು ಕಿಡ್ನಿಕಾಯಿಲೆ ಶುರುವಾಗುತ್ತಿದೆ ಎಂದು ತಿಳಿಸುವ ಮೊದಲ ಚಿಹ್ನೆ.

ಮಧುಮೇಹದಿಂದ ಬಳಲುವ ಎಲ್ಲರೂ, ವರ್ಷಕ್ಕೊಮ್ಮೆ ಈ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು.

24 ಗಂಟೆಗಳ ಮೂತ್ರದ ಸ್ಯಾಂಪಲ್ ಅಥವಾ ಒಮ್ಮೆ ಕೊಡುವ ಸ್ಯಾಂಪಲ್ ಯಾವುದಾದರೊಂದು ಬಳಸಿ, ಈ ಪರೀಕ್ಷೆ ಮಾಡಲಾಗುವುದು. ಅತ್ಯಂತ ದುಬಾರಿಯಲ್ಲದ ಈ ವಿಶೇಷ ಪರೀಕ್ಷೆಯನ್ನು ಪ್ರಯೋಗಾಲಯದಲ್ಲಿ ಮಾಡಲಾಗುವುದು.

24 ಗಂಟೆಗಳಲ್ಲಿ ಶೇಖರಿಸಿ ಪರೀಕ್ಷಿಸಲಾದ ಮೂತ್ರದಲ್ಲಿ 30–300 ಮಿಗ್ರಾಂ ಆಲ್‍ಬ್ಯುಮಿನ್ ಕಂಡು ಬಂದಲ್ಲಿ ಅಥವಾ ಒಂದೇ ಒಂದು ಸ್ಯಾಂಪಲ್‍ನಲ್ಲಿ 30 ಮಿ.ಗ್ರಾಂ. ಆಲ್‍ಬ್ಯುಮಿನ್ ಪ್ರತೀ 1 ಗ್ರಾಂ ಕ್ರಿಯಾಟಿನಿನ್‍ಗೆ ಕಂಡು ಬಂದಲ್ಲಿ ಪರೀಕ್ಷೆಯನ್ನು ಪಾಸಿಟಿವ್ ಎನ್ನುವೆವು. ಆದರೂ ಸಹ, ಸ್ಥೂಲಕಾಯ, ಸಿಗರೇಟ್ ಸೇವನೆ, ರಕ್ತದಲ್ಲಿ ಹೆಚ್ಚಿನ ಕೊಬ್ಬಿನಂಶವಿರುವವರು, ಅತಿಯಾದ ವ್ಯಾಯಾಮ, ಮೂತ್ರನಾಳದ ಸೋಂಕು, ಹೆಚ್.ಐ.ವಿ. ಮುಂತಾದವರಲ್ಲಿಯೂ ಈ ಪರೀಕ್ಷೆಯು ‘ಪಾಸಿಟಿವ್’ ಆಗುವುದರಿಂದ, ವೈದ್ಯರನ್ನು ಸಂಪರ್ಕಿಸಿ, ಸರಿಯಾದ ಮಾಹಿತಿ ಪಡೆಯುವುದು ಸೂಕ್ತ.

ನಿಖರವಾಗಿ ಈ ಪರೀಕ್ಷೆಯನ್ನು ಮನೆಯಲ್ಲೇ ಮಾಡಬಹುದಾದ ಯಾವುದೇ ಸಲಕರಣೆಗಳು ಇಲ್ಲ.

·                    ‘ಮೈಕ್ರೋಆಲ್‍ಬ್ಯುಮಿನ್‍ಯೂರಿಯಾ’ ಇದೆ ಎಂದು ತಿಳಿಯಲು ಯಾವುದಾದರೂ ದೈಹಿಕ ಚಿಹ್ನೆಗಳಿವೆಯೇ ?

ಇಲ್ಲ ‘ಮೈಕ್ರೋಆಲ್‍ಬ್ಯುಮಿನ್‍ಯೂರಿಯ’ ಇದೆ ಎಂದು ತಿಳಿಸುವ ಯಾವುದೇ ರೋಗ ಚಿಹ್ನೆಗಳಿಲ್ಲ. ಡಯಾಬಿಟಿಸ್ ಹೊಂದಿರುವ ಎಲ್ಲರಿಗೂ ಇದರ ಬಗ್ಗೆ ತಿಳುವಳಿಕೆ ಅಗತ್ಯ.

·                    ರಕ್ತದಲ್ಲಿನ ಸಕ್ಕರೆ ಅಂಶವನ್ನು ಸರಿಯಾಗಿ ನಿಯಂತ್ರಣದಲ್ಲಿಟ್ಟುಕೊಂಡಲ್ಲಿ (ಟೈಟ್ ಗ್ಲೂೀಕೋಸ್ ಕಂಟ್ರೋಲ್) ಈ ದುಷ್ಪರಿಣಾಮವನ್ನು ನಿಯಂತ್ರಿಸಬಹುದೇ ?

ಹೌದು, ಖಂಡಿತ ! ಟೈಟ್ ಗ್ಲೂಕೋಸ್ ಕಂಟ್ರೋಲ್ ಅಂದರೆ ಅಥವಾ ಮಧುಮೇಹ ಕಂಟ್ರೋಲ್‍ನಲ್ಲಿದೆ ಎನ್ನುವುದನ್ನು ಆರಿಯುವುದು. ಊbಂ1ಛಿ ಎಂಬ (ಗೈಕೋಸಿಲೇಟೆಡ್ ಹಿಮೋಗ್ಲೋಬಿನ್) ಪರೀಕ್ಷೆಯ ಫಲಿತಾಂಶ ನೋಡಿ. ಊbಂ1ಛಿ ಯ ಪ್ರಮಾಣ ಶೇ. 7ಕ್ಕಿಂತ ಕಡಿಮೆಯಿದ್ದಲ್ಲಿ. ನೀವು ರಕ್ತದ ಸಕ್ಕರೆಯಂಶವನ್ನು ಅತ್ಯಂತ ಸರಿಯಾದ ಪ್ರಮಾಣದಲ್ಲಿಟ್ಟುಕೊಂಡಿದ್ದೀರಿ ಎಂದರ್ಥ ಮತ್ತು ಅಂಥಹವರಲ್ಲಿ ಮೈಕ್ರೋ ಆಲ್‍ಬ್ಯುಮಿನ್‍ಯೂರಿಯ ಹಾಗೂ ಮಧುಮೇಹದ ಮೂತ್ರ ಪಿಂಡ ಸಮಸ್ಯೆಯ ಸಂಭವ ಕಡಿಮೆ.

·                    ಸಕ್ಕರೆ ಕಾಯಿಲೆಯಿರುವವರು, ಮೂತ್ರ ಪಿಂಡದ ಸಮಸ್ಯೆಯನ್ನು ತಡೆಯುವುದು ಹೇಗೆ ?

ರಕ್ತದಲ್ಲಿನ ಸಕ್ಕರೆಯಂಶವನ್ನು ಸರಿಯಾದ ಪ್ರಮಾಣದಲ್ಲಿಡುವುದು.

·                    ರಕ್ತದೊತ್ತಡವು (125/75 ಮಿ.ಮಿ. ಮಕ್ರ್ಯೂರಿ) ಸರಿಯಾದ ಪ್ರಮಾಣದಲ್ಲಿರುವಂತೆ ನಿಗ್ರಹಿಸುವುದು.

ಸಿಗರೇಟ್, ಬೀಡಿ ಸೇವನೆ ಅಥವಾ ಯಾವುದೇ ರೀತಿಯ ತಂಬಾಕಿನ ಸೇವನೆಗೆ ವಿದಾಯ ಹೇಳುವುದು.

·                    

·                    ವೈದ್ಯರ / ಡಯಟಿಷಿಯನ್ ಸಲಹೆ ಮೇರೆಗೆ ಸರಿಯಾದ ಆಹಾರ ಸೇವನೆ.

·                    ರಕ್ತದಲ್ಲಿನ ಕೊಬ್ಬಿನಂಶವನ್ನು ಹತೋಟಿಯಲ್ಲಿಡುವುದು.

ಮುಂತಾದ ಸೂತ್ರಗಳನ್ನು ಪಾಲಿಸಿದಲ್ಲಿ ಕಿಡ್ನಿ ಸಮಸ್ಯೆಯನ್ನು ಮದುಮೇಹಿಗಳು ದೂರವಿರಿಸಬಹುದು.

“ಮೈಕ್ರೋಆಲ್‍ಬ್ಯುಮಿನ್‍ಯೂರಿಯ” ಕಂಡು ಬಂದ ತಕ್ಷಣ ಕಿಡ್ನಿ ವೈಫಲ್ಯವಾಗುವುದಿಲ್ಲ. ಕಿಡ್ನಿ ಸಮಸ್ಯೆ ಹೆಚ್ಚಾಗಲು 10-15 ವರ್ಷಗಳಾಗುವುದು. ಒಮ್ಮೆ ಈ ಪರೀಕ್ಷೆ “ಪಾಸಿಟಿವ್’’ ಎಂದು ಕಂಡು ಬಂದಲ್ಲಿ, ಮುಂದಿನ ಮೂರು ತಿಂಗಳಲ್ಲಿ, ವೈದ್ಯರ ಸಲಹೆ ಮೇರೆಗೆ ಮತ್ತೊಂದು ಬಾರಿ ಪರೀಕ್ಷಿಸಿ, ಖಚಿತ ಪಡಿಸಲಾಗುವುದು.

ಕಿಡ್ನಿಯ ಸಮಸ್ಯೆಯನ್ನು ಶೀಘ್ರವಾಗಿ ಗುರ್ತಿಸಲು ಈ ಪರೀಕ್ಷೆಯನ್ನು ಮಧುಮೇಹಿಗಳು, ಅಪಾರರಕ್ತದೊತ್ತಡ ಹೊಂದಿರುವವರು, ಹಾರ್ಟ್‍ಅಟ್ಯಾಕ್, ಸ್ಟ್ರೋಕ್(ಹೃದಯಾಘಾತ , ಪಾಶ್ರ್ವವಾಯು) ಆದವರು ಹಾಗೂ ಗರ್ಭಿಣಿ ಸ್ತ್ರೀಯರಿಗೆ ಮಾಡಲಾಗುವುದು.