ಮದುವೆ ಜೋಕುಗಳೆರಡು!

ಮದುವೆ ಜೋಕುಗಳೆರಡು!

ಮದುವೆ ಮನೆಯಲ್ಲಿ ಯಾರೋ ಹಿರಿಯರೊಬ್ಬರು ಲಗುಬುಗೆಯಿಂದ ಬಂದು ಮತ್ತೊಬ್ಬರನ್ನ ಕೇಳಿದರು "ಮಗೂಗೆ ಹೆಸರಿಟ್ಟಾಯ್ತೇ?"

ಆ ಮತ್ತೊಬ್ಬರು "ಸ್ವಾಮೀ, ಸ್ವಲ್ಪ ಮೆಲ್ಲಗೆ ಕೇಳಿ ... ನೀವು ಏನೂ ಅಂತ ನನಗೆ ಅರ್ಥವಾಯಿತು. ಇದು ಮದುವೆ ಮನೆ. ನಾಮಕರಣ ಅಲ್ಲ. ಸುಮ್ಮನೆ ಊಟ ಮಾಡಿ ಹೋಗಿ ಆಯ್ತಾ?"

ಹಿರಿಯರು "ತಾವು ನನ್ನನ್ನು ತಪ್ಪಾಗಿ ತಿಳಿದುಕೊಂಡ್ರಿ ಅನ್ನಿಸುತ್ತೆ. ನಾನು ಹುಡುಗಿ ಅಪ್ಪ. ನನ್ನ ಮಗೂಗೆ ಅತ್ತೆ ಮನೆಯರು ಹೆಸರಿಟ್ಟರೇ ಅಂತ"

ಆ ಮತ್ತೊಬ್ಬರು "ಓ! ಹಾಗೋ !! ನಾನಂದುಕೊಂಡೆ ನೀವೂ ನನ್ನ ಹಾಗೆ ನಾಮಕರಣದ ಮನೆ ಅಂತ ಅಂದುಕೊಂಡಿರೇನೋ ಅಂತ !!!"

ಹಿರಿಯರು "ಅಂದ್ರೇ? ತಾವು?"

 

----

ಬಸ್'ನಲ್ಲಿ ಒಂದು ಸಂಭಾಷಣೆ

"ನಿಮ್ಮ ಮದುವೆ ಆಗಿ ಎಷ್ಟು ವರ್ಷವಾಯಿತು?"

"ಹೆಚ್ಚು ಕಮ್ಮಿ ಇಪ್ಪತ್ತೆಂಟು ವರ್ಷ ಆಯಿತು ಅನ್ನಿ"

"ಇಪ್ಪತ್ತೆಂಟು? ಓ! ನಾನಿನ್ನೂ ಹುಟ್ಟೇ ಇರಲಿಲ್ಲ. ನೀವು ಇಪ್ಪತ್ತೆಂಟರಲ್ಲಿ ಇದ್ದೀರಿ, ನನಗಿನ್ನೂ ಮದುವೇನೇ ಆಗಿಲ್ಲ""

"ತಾವು ಆವೇಳೆಗೆ ಹುಟ್ಟಿದ್ದರೆ ನನ್ನ ಮರ್ಯಾದೆ ಏನಾಗ್ತಿತ್ತು?"

ಹಿಂದಿನ ಸೀಟಿನವರು ಪಕ್ಕದವರಿಗೆ "ಪಾಪ ಅವರೇನೋ ಹೇಳಿದರೆ ಇವರೇನೋ ಹೇಳ್ತೀರಲ್ಲ?"

ಅದನ್ನು ಕೇಳಿಸಿಕೊಂಡ ಇವರು "ಸ್ವಾಮೀ, ಇದು ನಮ್ಮ ಮನೆ ವಿಷ್ಯ. ಇವನು ನನ್ನ ಮಗ. ತನಗಿನ್ನೂ ಮದುವೆ ಆಗಿಲ್ಲ ಅಂತ ತಿಳಿಸೋ ಪರಿ ಇದು"

 

Comments