ಮಧುಮೇಹ ರೋಗಿಗಳೇ ಕಣ್ಣಲ್ಲಿ ಕಣ್ಣಿಟ್ಟು ನಿಮ್ಮ ಪಾದಗಳನ್ನು ರಕ್ಷಿಸಿ

ಮಧುಮೇಹ ರೋಗಿಗಳೇ ಕಣ್ಣಲ್ಲಿ ಕಣ್ಣಿಟ್ಟು ನಿಮ್ಮ ಪಾದಗಳನ್ನು ರಕ್ಷಿಸಿ

 

ಸಕ್ಕರೆ ಖಾಯಿಲೆಯ ಬಹುತೇಕ ರೋಗಿಗಳು, ಅಸ್ಪತ್ರೆಗೆ ದಾಖಲಾಗುವುದು ಕಾಲು ಹಾಗೂ ಪಾದಗಳ ತೊಂದರೆಗಳಿಂದ. ಈ ತೊಂದರೆಗಳ ವೈಪರೀತ್ಯ ರೋಗಿಯ ಕಾಲನ್ನು ಶಸ್ತ್ರ ಚಿಕಿತ್ಸೆಯ ಮೂಲಕ ತೆಗೆದು ಹಾಕುವ ಮಟ್ಟಕ್ಕೇರುತ್ತದೆ. ಯಾವುದೇ ಅಪಘಾತಕ್ಕೊಳಗಾಗದೇ ಮನುಷ್ಯ ಕಾಲನ್ನು ಕಳೆದುಕೊಳ್ಳುತ್ತಿರುವುದಕ್ಕೆ ಈ ಖಾಯಿಲೆ ಒಂದು ಕಾರಣ. ಆದ್ದರಿಂದ ಪಾದಗಳನ್ನು ಸಂರಕ್ಷಿಸಿಕೊಳ್ಳುವುದು ಪ್ರತಿಯೊಬ್ಬ ಮಧು ಮೇಹಿ ರೋಗಿಯ ಕರ್ತವ್ಯ.

ಈ ಖಾಯಿಲೆಯುಳ್ಳ ಶೇ. 15 ರಷ್ಟು ಜನರಲ್ಲಿ ಪಾದಗಳ ಸಮಸ್ಯೆ ಕಂಡು ಬರುತ್ತದೆ. ಅವರಲ್ಲಿ ಬಹುತೇಕ ಜನರು ಕಾಲ್ಬೆರಳುಗಳ, ಪಾದಗಳು ಅಥವಾ ಕಾಲಿನ ಂmಠಿuಣಚಿಣioಟಿ ಗೆ (ಆಪರೇಷನ್ ಮೂಲಕ ಕಾಲನ್ನು ತೆಗೆದು ಹಾಕುವುದು) ಗುರಿಯಾಗುತ್ತಾರೆ.

ಮಧುಮೇಹ ರೋಗಿಯ ಕಾಲು ಹಾಗೂ ಪಾದದ ತೊಂದರೆಗಳಿಗೆ ಕಾರಣವೇನು ?

1)         ಮಧುಮೇಹ ರೋಗದಿಂದುಂಟಾಗುವ ನರಗಳ ದೌರ್ಬಲ್ಯ (ಡಯಾಬಿಟಿಕ್ ನ್ಯೂರೋಪಥಿ) ಕೈ ಕಾಲುಗಳ ನರಗಳು ಕೆಲಸ ಮಾಡುವ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಕೈ ಕಾಲುಗಳಲ್ಲಿ ಸ್ವರ್ಶಜ್ಞಾನ ಕಡಿಮೆಯಾಗುವುದು, ನೋವುಂಟಾಗುವುದು, ಜೋಮು ಹಿಡಿಯುವುದು, ಪಾದ ಹಾಗೂ ಅಂಗೈಗಳಲ್ಲಿ ಉರಿ, ಕೈ ಕಾಲು ಸುಸ್ತು ಕ್ರಮೇಣ ನೋವು ಸಹಾ ತಿಳಿಯದಿರುವುದು ಹೀಗಾಗಿ ಪಾದಗಳಲ್ಲಿ ಮುಳ್ಳು ಚುಚ್ಚಿದರೆ, ಗಾಯವಾದರೆ, ಅದರ ಕಡೆ ಗಮನ ಹರಿಯುವುದೇ ಇಲ್ಲ. ಇದಲ್ಲದೆ ಮತ್ತೊಂದು ರೀತಿಯ ನರಗಳ ದೌರ್ಬಲ್ಯದಿಂದ (ಆಟೋನಾಮಿಕ್ ನ್ಯೂರೋಪಥಿ) ಚರ್ಮವು ಒಣಗುವುದು, ಬೆವರು ಕಡಿಮೆಯಾಗುವುದು, ರಕ್ತನಾಳಗಳಲ್ಲಿ ರಕ್ತ ಸಂಚಲನೆಯ ಕ್ರಮ ಏರು ಪೇರಾಗುವುದು, ಕೀಲುಗಳಲ್ಲಿ ಜಡತೆ ಉಂಟಾಗುವುದು.

2)        ಮಧುಮೇಹ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ : ಇದರಿಂದ ರೋಗಾಣುಗಳನ್ನು ಹೊಡೆದೋಡಿಸುವುದು ದೇಹಕ್ಕೆ ಕಷ್ಟ ಹಾಗೂ ಸಕ್ಕರೆ ಖಾಯಿಲೆ ಹತೋಟಿಯಲ್ಲಿಲ್ಲದಿದ್ದರೆ, ರಕ್ತದಲ್ಲಿನ ಹೆಚ್ಚಿನ ಸಕ್ಕರೆಯ ಅಂಶ, ರೋಗಾಣುಗಳಿಗೆ ಸಿಹಿ ಊಟ ದೊರಕಿಸಿಕೊಟ್ಟಂತಾಗಿ, ಅವು ವೃದ್ಧಿಯಾಗುತ್ತಾ ಹೋಗುತ್ತವೆ. ಗಾಯವು ಮಾಯುವುದಕ್ಕೆ ಇದು ಅಡ್ಡಿಯಾಗುತ್ತದೆ.

ಮೇಲೆ ತಿಳಿಸಿದ ಮೂರು ಕಾರಣಗಳೂ ಒಟ್ಟುಗೂಡಿ ಅಥವಾ ಮೊದಲೆರಡು ಕಾರಣಗಳು ಜೊತೆಯಾಗಿ ಸೇರಿ ಪಾದದ ತೊಂದರೆಯನ್ನುಂಟು ಮಾಡುತ್ತದೆ. ರೋಗಿಗಳ ನಿರ್ಲಕ್ಷತೆಯೂ ಮತ್ತೊಂದು ಕಾರಣವಾಗಿದ್ದು, ಸಣ್ಣ ಪುಟ್ಟ ಗಾಯಗಳಿಗೆ ಸಕಾಲಿಕ ವೈದ್ಯರ ಸಲಹೆಯನ್ನು ಪಡೆಯದಿರುವುದರಿಂದ ಚಿಕ್ಕ ಗಾಯಗಳು ದೊಡ್ಡದಾಗಿ ಉಲ್ಬಣವಾಗುತ್ತವೆ. ವಯಸ್ಸಾದವರು, ಬಹಳ ವರ್ಷಗಳಿಂದ ಸಕ್ಕರೆ ಖಾಯಿಲೆ ಇರುವವರಿಗೆ ಪಾದಗಳ ತೊಂದರೆ ಹೆಚ್ಚು.

ಮಧುಮೇಹ ರೋಗಿಯ ಪಾದ (ಡಯಾಬಿಟಿಸ್ ಫುಟ್) ರೋಗ ಲಕ್ಷಣಗಳು : ಪಾದದಲ್ಲಿ ಹುಣ್ಣು (ಅಲ್ಸರ್), ಸೀಳುವಿಕೆ, ಬೊಬ್ಬೆಗಳು, ಕೀವು ತುಂಬಿದ ಗುಳ್ಳೆಗಳು, ಕಾಲ್ಬೆರಳುಗಳ ಸಂಧಿಯಲ್ಲಿ ಈuಟಿgಚಿಟ iಟಿಜಿeಛಿಣioಟಿ, ಬೆರಳು, ಪಾದ ಹಾಗೂ ಕಾಲಿನ ಕೆಲ ಭಾಗಗಳು ಕೊಳೆತು ದುರ್ಗಂಧ ಬೀರುವುದು, ಕಾಲಿನಲ್ಲಿನ ಪಾದದ ಕೀಲುಗಳ ಚಲನ ವಲನ ಕಡಿಮೆಯಾಗುವುದು, ಮೂಳೆಗಳ iಟಿಜಿeಛಿಣioಟಿ ಮುಂತಾದವು.

ಹಾಗಾದರೆ, ಮಧುಮೇಹಿಯ ಕಾಲಿನ ರಕ್ಷಣೆಗೆ ಬೇಕು / ಬೇಡಗಳು ಯಾವುವು ?

·                    ಪಾದಗಳನ್ನು ದಿನಾ ಸೋಪು ಹಾಗೂ ಬೆಚ್ಚನೆಯ ನೀರಿನಲ್ಲಿ ತೊಳೆದು, ಟವಲ್‍ನಿಂದ ಒರೆಸಿ, ಒಣಗಿಸಿರಿ. ಬೆರಳುಗಳ ಸಂದಿನಲ್ಲಿ ತೇವಾಂಶ ಇರದಂತೆ ನೋಡಿಕೊಳ್ಳಿ.

·                    ನೀವು ಬಳಸುವ ನೀರಿನ ಉಷ್ಣಾಂಶವನ್ನು ಗಮನಿಸಿ, ಕುದಿಯುವ, ಅಥವಾ ಬಹಳ ಬಿಸಿಯಾದ ನೀರು ಕಾಲಿನ ಚರ್ಮವನ್ನು ಸುಟ್ಟರೂ ಅದು ತಿಳಿಯದೇ ಹೋಗಬಹುದು.

·                    ಕಾಲಿನ ತೇವಾಂಶ ಕಡಿಮೆ ಮಾಡಲು, ಕಾಲನ್ನು ಮೃದುವಾಗಿಡಲು ಯಾವುದೇ ಟಾಲ್ಕಮ್ ಪೌಡರ್ ಹಾಕಿರಿ. ಕಾಲಿನ ಚರ್ಮ ಒಣಗಿದ್ದರೆ, ಕೋಲ್ಡ್ ಕ್ರೀಮ್, ಎಣ್ಣೆ, ವ್ಯಾಸಲೀನ್ ಅಥವಾ ಮಾಯಿಸ್ಚರೈಸರ್ ಕ್ರೀಂ ಅಥವಾ ಲೋಶÀನ್ ಹಚ್ಚಿರಿ.

·                    ಈ ಕ್ರೀಮ್ / ಲೋಶನ್‍ಗಳನ್ನು ಬೆರಳ ಸಂದಿಗಳಲ್ಲಿ ಹಚ್ಚಬೇಡಿ, ಅಲ್ಲಿ ತೇವಾಂಶ ಹೆಚ್ಚಾಗಿ ರೋಗಾಣುಗಳು ಬೆಳೆಯಲು ಅನುಕೂಲವಾಗುತ್ತವೆ.

·                    ಸೀಳು, ತರಚಿದ ಗಾಯ, ಹುಣ್ಣು, ಉಗುರುಗಳ ವ್ಯತ್ಯಾಸ ಇವುಗಳಿಗಾಗಿ ಪ್ರತಿ ದಿನ ನಿಮ್ಮ ಪಾದಗಳನ್ನು ಕೂಲಂಕುಶವಾಗಿ ಪರಿಶೀಲಿಸಿರಿ, ಬಗ್ಗಿ, ಕಾಲ್ಗಳನ್ನು ನೋಡಲಾಗದಿದ್ದರೆ, ಕಾಲ್ಗಳನ್ನು ಕುರ್ಚಿಯ ಮೇಲಿಟ್ಟು ಅಥವಾ ಪಾದದಡಿ ಒಂದು ಕನ್ನಡಿಯನ್ನಿಟ್ಟು ಪರೀಕ್ಷಿಸಿ ಇಲ್ಲವೇ ಬೇರೆಯಾಗಿಗಾದರೂ ನೋಡಲು ಹೇಳಿರಿ.

·                    ಕಾಲ್ಬೆರಳುಗಳ ಉಗುರುಗಳನ್ನು ಕಟ್ ಮಾಡುವಾಗ ಅವು ಒಂದೇ ಸಮನಾಗಿ Sಣಡಿಚಿighಣ ಆಗಿರಲಿ.

·                    ಉಗುರುಗಳನ್ನು ಆಳವಾಗಿ ಉಗುರಿನ ಕಣ್ಣಿನವರೆಗೆ ಹಾಗೂ ಬಿಲ್ಲಿನಾಕಾರದಲ್ಲಿ ಕಟ್ ಮಾಡಬೇಡಿ ಇದರಿಂದ ಉಗುರಿನ ತುದಿಗಳಲ್ಲಿ iಟಿಜಿeಛಿಣioಟಿ ಅಗಬಹುದು.

·                    ಕಾಲ್ಗಳಲ್ಲಿ ಆಣೆ ಅಥವಾ ಗಂಟುಗಳಿದ್ದರೆ ಅದಕ್ಕೆ ನೀವೇ ಸ್ವತಃ ಔಷಧೋಪಚಾರ ಮಾಡದಿರಿ. ಆಣೆಯನ್ನು ತೆಗೆಯಲು ಕಾರ್ನ್‍ಕ್ಯಾಪ್, ಪ್ಲಾಸ್ಟರ್ ಅಥವಾ ಬ್ಲೇಡು ಇತ್ಯಾದಿಗಳನ್ನು ಬಳಸದಿರಿ.

·                    ಬರಿಗಾಲಲ್ಲಿ ಓಡಾಡುವುದನ್ನು ನಿಲ್ಲಿಸಿ (ಮನೆಯಲ್ಲಿಯೂ ಸಹ) ಹತ್ತಿಯ ಮೆತ್ತನೆಯ ಕಾಲು ಚೀಲಗಳನ್ನು ಬಳಸಿರಿ.

·                    ನೈಲಾನ್ ಕಾಲುಚೀಲ ಹಾಗೂ ಉದ್ದವಾದ ಮೊಣಕಾಲಿನವರೆಗೆ, ಬರುವ ಬಿಗಿಯಾದಂತಹ (Sಣoಛಿಞiಟಿgs) ಕಾಲು ಚೀಲ ಬಳಸದಿರಿ

·                    ಬೆರಳುಗಳನ್ನು ಗಾಳಿಗೆ ಬಿಡುವಂತಹ, ಮುಂಭಾಗದಲ್ಲಿ ತೆರೆದ ಔಠಿeಟಿ ಷೂ ಹಾಕಿಕೊಳ್ಳಿ.

·                    ಮಧುಮೇಹ ರೋಗಿಗಳಿಗಾಗಿಯೇ ವಿಶೇಷ ರೀತಿಯ ಚಪ್ಪಲಿಗಳು ದೊರಕುತ್ತವೆ. ಅದನ್ನು ಧರಿಸಬಹುದು. ಸಾಮಾನ್ಯವಾಗಿ ಪಾದ ಯಾವಾಗಲೂ ಪೂರ್ಣ ನೆಲ ಮುಟ್ಟದೆ ಸ್ವಲ್ಪ ಎತ್ತರದಲ್ಲಿರುತ್ತದೆ. (ಕಮಾನಿನ ಹಾಗೆ) ಹಾಗೂ ಪಾದದಲ್ಲಿ ಸಾಕಷ್ಟು ಕೊಬ್ಬು ಮತ್ತು ಇತರೇ ಟಿಶ್ಯುಗಳಿರುತ್ತವೆ. ಇದು ಕ್ರಮೇಣ ಕಡಿಮೆಯಾಗಿ, ಕಾಲು ಚಪ್ಪಟೆ ಆಗುತ್ತದೆ. ಆದ್ದರಿಂದ ಪಾದಗಳ ಮೇಲೆ ಒತ್ತಡ ಹೆಚ್ಚಾಗಿ, ಅಲ್ಸರ್, ಹಾಗೂ ಗಾಯಗಳುಂಟಾಗುತ್ತವೆ.

·                    ಕಾಲಿಗೆ ಸರಿ ಹೊಂದದ ಚಪ್ಪಲಿ, ಷೂಗಳು, ಚೂಪಾದ ಹಾಗೂ ಎತ್ತರದ ಚಪ್ಪಲಿಗಳನ್ನು ಬಳಸಬೇಡಿ.

ಗಮನಿಸಲೇ ಬೇಕಾದಂತಹ ಇತರ ಅಂಶಗಳು :

·                    ಸಕ್ಕರೆ ಖಾಯಿಲೆಯನ್ನು ಹತೋಟಿಯಲ್ಲಿಡಿರಿ.

·                    ದೇಹದ ತೂಕವನ್ನು ಸರಿ ಪ್ರಮಾಣದಲ್ಲಿರಿಸಿ.

·                    ರಕ್ತದಲ್ಲಿ ಕೊಬ್ಬಿನಂಶ (ಕೊಲೆಸ್ಟೆರಾಲ್) ಕಡಿಮೆಯಿರಲಿ

·                    ಹೆಚ್ಚಿನ ರಕ್ತದೊತ್ತಡ ಇರುವವರು ಸರಿಯಾದ ಚಿಕಿತ್ಸೆ ಪಡೆಯಿರಿ.

·                    ನಡೆಯುವುದು, ಈಜುವುದು, ಸೈಕ್ಲಿಂಗ್ ಇವು ಪಾದಗಳಿಗೆ ಒಳ್ಳೆಯ ವ್ಯಾಯಾಮ. ಕುಳಿತಿರುವಾಗ ಪಾದಗಳನ್ನು ಕಾಲ್ಗಳನ್ನು ಎತ್ತರದಲ್ಲಿಡಿ. ಕಾಲ್ಬೆರಳುಗಳು ಹಾಗೂ ಹಿಮ್ಮಡಿ ಕೀಲನ್ನು ಮೇಲೆ ಕೆಳಗೆ ಆಡಿಸಿ, ಕಾಲಿನ ರಕ್ತ ಚಲನೆ ವೃದ್ಧಿಯಾಗುತ್ತದೆ.

·                    ಕಾಲ್ಗಳನ್ನು ಒಂದರ ಮೇಲೊಂದು ಹಾಕಿ ಬಹಳ ಹೊತ್ತು ಕೂರಬೇಡಿ. ಓಡುವುದು, ಜಂಪ್ ಮಾಡುವುದನ್ನು ತಡೆಯಿರಿ. ಈ ದಿನದಿಂದಲೇ ಪಾದಗಳ ರಕ್ಷಣೆಯನ್ನು ಶುರುಮಾಡಿ. ಏನಾಗುತ್ತೋ ನೋಡೋಣ” ಎಂದು ಕಾಯದೆ ಚಿಕ್ಕ ಗಾಯವಾದರೂ ಸಹ ತಕ್ಷಣ ವೈದ್ಯರ ಸಲಹೆಯನ್ನು ಪಡೆಯಿರಿ.