ಮಧ್ಯ ಬೆರಳಿನ ಪುರಾಣ - History of the Middle Finger

ಮಧ್ಯ ಬೆರಳಿನ ಪುರಾಣ - History of the Middle Finger

ಬರಹ

ಮಧ್ಯ ಬೆರಳಿನ ಪುರಾಣ

ಯಾವಾಗ್ಲಾದ್ರೂ, I mean ಒಂದ್ಸಲನಾದ್ರೂ, ನೀವು ಯಾರಮೇಲಾದ್ರೂ ಫುಲ್ಲ್ ಉರ್ಕೊಂಡು, ಖರಾಬ್ ಮೂಡಲ್ಲಿ ಇದ್ದಾಗ..
ಬಲಗೈನ ಮಧ್ಯದ ಬೆರಳನ್ನು ಎತ್ತಿ (ಮಿಕ್ಕೆಲ್ಲಾ ಬೆರಳನ್ನು ಮಡಿಚಿಕೊಂಡು) ಬಾಯಲ್ಲಿ "F**K You" ಅಂತಾ ಹೇಳಿ ತೋರಿಸಿದೀರಾ ತಾನೇ ? ಅಥವಾ ಈ ಥರಾ ಯಾರಾದ್ರೂ ಮಾಡೋದನ್ನು ನೋಡಿದೀರಾ ತಾನೆ ?

ಆ particular gesture ಯಾಕೆ ಬಂತು ಅನ್ನೋದು ಗೊತ್ತಾ ? ಓದಿ....

ದೇವ್ರಾಣೇಗ್ಲೂ ಇದರ ಬಗ್ಗೆ ಮುಂಚೆ ಗೊತ್ತಿರ್ಲಿಲ್ಲಾ. ಸ್ನೇಹಿತ ಶ್ರೀಕಾಂತ್ (ಶ್ವ್ರೀ) ಇದರ ಬಗ್ಗೆ ಹೇಳಿ, ಈ ಮೇಲ್ ಕಳಿಸುವ ತನಕ.
ಗೊತ್ತಾದ ಮೇಲೆ ಎಲ್ಲರಿಗೂ ತಿಳಿಸಬೇಕೆಂಬ ಆಸೆ, ಚಪಲ. ಎಲ್ರಿಗೂ ಹೇಳ್ಕೊಂಡು ಬರೋಕ್ಕಂತೂ ಆಗಲ್ಲಾ, ಅದಕ್ಕೆ ಬ್ಲಾಗಿನಲ್ಲಿ ಹಾಕಿದರೆ ಸರಿ ಅನ್ನುಸ್ತು.
Isnt History more fun when you know something about it ?

ಮುಂಚಿಂದಲೂ ಕೂಡಾ ಫ್ರೆಂಚ್ ಹಾಗು ಇಂಗ್ಲಿಷರಿಗೆ ಹತ್ತಿದ್ದು ಹರೀತಿರ್ಲಿಲ್ಲಾ ಅನ್ನೋದು ಎಲ್ಲರಿಗೂ ಸುಮಾರಾಗಿ ತಿಳಿದಿರುವ ವಿಚಾರ. ಈ ಮಧ್ಯ ಬೆರಳನ್ನು ತೋರಿಸುವ ಪರಿಪಾಠದ ಜನನ ಇವರಿಂದಲೇ.

ಮಧ್ಯಪ್ರಾಚ್ಯ ಯೂರೋಪಿನ ಏಜಿನ್ಕೋರ್ಟ್ ಕಾಳಗಕ್ಕೂ ಮುನ್ನ (Battle of Agincourt A.D. 1415) ಫ್ರೆಂಚರು, ಬ್ರಿಟಿಷರನ್ನು ಸೋಲಿಸುವ ಉದ್ದೇಶದಿಂದ ಅವರ ಬಳಿ ಸೆರೆಹಿಡಿಯಲಾಗಿದ್ದ ಬ್ರಿಟಿಷ್ ಯುದ್ಧಖೈದಿಗಳ ಬಲಗೈ ಮಧ್ಯಬೆರಳನ್ನು ಕತ್ತರಿಸುವ ಪರಿಪಾಠ ಬೆಳೆಸಿಕೊಂಡರು. ಮಧ್ಯದ ಬೆರಳಿಲ್ಲದಿದ್ದರೆ ಬ್ರಿಟಿಷರು ತಮ್ಮ ಬಿಲ್ಲಿನ ಹುರಿಯನ್ನು ಸಮರ್ಥವಾಗಿ ಎಳೆಯಲು ಅಸಾಧ್ಯ. ಬ್ರಿಟನ್ನಿನ ಬಿಲ್ಲು ತುಂಬಾ ಖ್ಯಾತವಾದದ್ದು. ಅದನ್ನು ಇಂಗ್ಲಿಷಿನಲ್ಲಿ "ENGLISH LONGBOW" ಎನ್ನುತ್ತಾರೆ.
ಈ ಬಿಲ್ಲನ್ನು ಇಂಗ್ಲೆಡಿನ್ನಲ್ಲೇ ಕಾಣಸಿಗುವ "YEW" ಎನ್ನುವ ಮರದಿಂದ ಮಾಡಲಾಗುತ್ತಿತ್ತು. ಹಾಗಾಗಿ ಬಿಲ್ಲಿನ ಹುರಿಯನ್ನು ಎಳೆದು ಬಾಣವನ್ನು ಬಿಡುವುದಕ್ಕೆ "Plucking the YEW" ಅಥವಾ "Pluck YEW" ಎನ್ನುತ್ತಿದ್ದರು. ಹೀಗೆ ಮಧ್ಯದ ಬೆರಳನ್ನು ಕತ್ತರಿಸಿ, ಬ್ರಿಟಿಷ್ ಬಿಲ್ಗಾರರನ್ನು ಕೈಲಾಗದವರಂತೆ ಮಾಡಿ ಯುದ್ಧವನ್ನು ಗೆಲ್ಲುವ ಇರಾದೆ ಇತ್ತು ಫ್ರೆಂಚರಿಗೆ.

ಅಶ್ಚರ್ಯವೆಂಬಂತೆ, ಫ್ರೆಂಚರು ಮಾಡಿದ ಒಂದು ಸಣ್ಣ ತಪ್ಪಿಗೆ ಬ್ರಿಟಿಷರು ಮೇಲುಗೈ ಸಾಧಿಸಿ ಜಯಗಳಿಸಿದರು. ಹೀಗೆ ಆದ್ಮೇಲೆ ಸುಮ್ನಿರೋದಕ್ಕೆ ಆಗುತ್ತಾ ? ಸೋತ ಫ್ರೆಂಚರನ್ನು ಅಣಕ ಮಾಡಿ ಉರಿಸಲು ಶುರು ಮಾಡಿದರು. ಹೇಗೆ ??
ತಮ್ಮ ಬಲಗೈನ ಮಧ್ಯ ಬೆರಳನ್ನು ತೋರಿಸಿ - "ನೋಡ್ರಪ್ಪಾ, ನಾವು ಬಾಣ ಬಿಡಲು ಸಾಧ್ಯ (See, We can still Pluck the YEW)" ಎಂದು.

PLUCK YEW ಅಂತಾ ಹೇಳೋದು ಕಷ್ಟವೆಂದು, ಅದನ್ನು ಅವರ ಅನುಗುಣವಾಗಿ F ಗೆ ತಿದ್ದಿಕೊಂಡರು. ಇದನ್ನು LABODENTALS FRICTAVE ಅನ್ನುತ್ತಾರೆ.
ಅಂದರೆ PL (ಪ್ಲ) ಅನ್ನುವ ಜಾಗದಲ್ಲಿ F (ಫ) ಎನ್ನುತ್ತಾರೆ. ಹಾಗಾಗಿ PLUCK YEW ಅನ್ನೋದು F**K YEW ಆಯಿತು.
ಹಾಗಾಗಿ ಈ ಪದವು ಮಧ್ಯ ಬೆರಳಿನ ಸೆಲ್ಯೂಟಿನ (Middle Finger Salute) ಸಂಕೇತವಾಯಿತು.

ಬ್ರಿಟಿಷರ ಪ್ರಕಾರ ಇವತ್ತಿಗೂ ಇದು ಫ್ರೆಂಚರಿಗೆ ಸೆಲ್ಯೂಟ್ ಮಾಡುವ ಸರಿಯಾದ ರೀತಿಯಂತೆ.

AND YEW THOUGHT YEW KNEW EVERY PLUCKING THING

-------------------------------------------------------------------
ನಿಮ್ಮವನು,
ಕಟ್ಟೆ ಶಂಕ್ರ
http://somari-katte.blogspot.com