ಮನದಾಳದ ನೋವಿನ ಕವಿತೆ

ಮನದಾಳದ ನೋವಿನ ಕವಿತೆ

ಕವನ

ಮನದಾಳದ ನೋವಿನ ಕವಿತೆ..
 
ನಿಜವಾದ ಪ್ರೀತಿಗೆ ಬೆಲೆಯಿಲ್ಲ ಈ
ಭೂಮಿಯ ಮೇಲೆ
ಹೃದಯವ ಬಗೆದಿಟ್ಟರು ಕಡೆಗೂ
ಈ ಪ್ರೀತಿಗೆ ಸೋಲು!
ನಿಜವಾದ ಪ್ರೀತಿ ಮಾಡಿದರೆ
ಕೇವಲ ತಾತ್ಸಾರ, ತಿರಸ್ಕಾರ.
ಆಮಿಷ ಒಡ್ಡಿ, ಬಣ್ಣ ಬಣ್ಣದ-
ಮಾತಿಗೆ ಮಾತ್ರ ಪ್ರೀತಿಯಾಗುವುದು ಸಾಕಾರ.
ನನ್ನ ಅನುಭವದ ಮಾತು ಕೇಳಿರೋ!
ನಿಜವಾದ ಪ್ರೀತಿ ಮಾಡದಿರಿ,
ಮಾಡಿದರು ಪ್ರೀತಿ ತೊರದಿರಿ,
ತೊರಿಸಿಯೇ ಬಿಟ್ಟಿರಾ?
ಎಲ್ಲುಂಟು ಬೆಲೆ ಅದಕೆ?
ಕೇವಲ ನೋವು ಮನಕೆ.
ಇವೆಲ್ಲಕೆ ನನ್ನ ಕಥೆಯೇ ಸಾಕ್ಷಿ!
ಪ್ರೀತಿಸಿದೆ  ಅವಳನು ಮನದಾಳದಿಂದ,
ಅದಾಗಿರಲಿಲ್ಲ ಕೇವಲ ಮೋಹ ಅಥವ ಸೆಳೆತ.
ಅವಳಿಗಾಗಿ ನನ್ನ ಹೃದಯವು ದಿನವು ಕಣ್ಣೀರಿಡುತಿತ್ತು,
ಹೃದಯವು ಅವಳ ಹೆಸರನೆ ನರಕಿತ್ತು ಕೂಗುತ್ತಿತ್ತು,
ಕೇಳಿದರೂ ಯಾಕೋ ತಿರುಗೇ ನೋಡಲಿಲ್ಲ ಆಕೆ
ಈ ರೀತಿ ಪ್ರೀತಿ ಮಾಡಿ ನೋವನುಭವಿಸುವ ಕಷ್ಟ ನಿಮಗೂ ಬೇಕೆ?
ಪ್ರೀತಿಗೆ ನೀವು ಬೀಳದಿರೋ, ಬಿದ್ದು ಒದ್ದಾಡದಿರೋ!
ನಾ ಬಿದ್ದಾಗಿದೆ, ಏಳಲು ಆಗದು,
ದಿನವು ನರಳದೆ ನನ್ನ ಜೀವನ ಸಾಗದು.
ಕಾಯುತ್ತಲೇ ಇರುತ್ತೇನೆ ನನ್ನವಳಿಗಾಗಿ,
ಬರುವಳೋ ಅಥವ ಬರದೇ ಇರುವಳೋ ಗೊತ್ತಿಲ್ಲ,
ನನ್ನ ಈ ನಿಜವಾದ ಪ್ರೀತಿಗೆ ಮಾತ್ರ ಎಂದಿಗೂ ಸಾವಿಲ್ಲ..!!!!!
 
 

 

Comments