ಮನದಾಳದ ಮಮತೆ

ಮನದಾಳದ ಮಮತೆ

ಕವನ

 


ನವಮಾಸ ನವದಿನಗಳ ಕತ್ತಲೆಯ ಗರ್ಭದಲಿ


ಹೊತ್ತು ಭಾರ ನಡೆದು ದೂರ ತಲುಪಿದಳು ತೀರ....


 


ಸಹಿಸಿದಳು ಇರಿತ, ಮೂಳೆ ಮುರಿತವನು


ನೆತ್ತರದ ನಿಟ್ಟುಸಿರು ಹರಿಸಿ, ಪಡೆದು ಮರುಜೀವವನು.....


 


ಕತ್ತಲಾ ಕೋಣೆಯಲಿ ಬೆತ್ತಲೆ ಬೊಂಬೆಯದು


ಅವ್ವಾ.. ಅವ್ವಾ... ಅನುತಿಹುದು ಹೊರಬಂದು....


 


ಮರೆತು ತನ್ನ ದೇಹ ಸೆಳೆತದಾ ನೋವನ್ನು


ಉಣಿಸಿದಳು ಅಮೃತವ ನೋಡಿ ಮಗುವಿನಾ ನಗುವನ್ನು.....


 


ದಿನಗಳುರುಳಿದ ಹಾಗೆ ಮುದ್ದಾದ ಕಪಿಚೇಷ್ಟೆಗಳು


ಪರಚುವುದು, ಎರಚುವುದು, ಇರುಳೆಲ್ಲಾ ಅಳುವುದು....


 


ಯುಗಗಳುರುಳಿದ ಹಾಗೆ ಆಕೆಯನು ಮರೆತು


ಕುಡಿಬಳ್ಳಿ ಬೆಳೆದು ಮರವ ತಬ್ಬಲು ಬೆರೆತು....


 


ಆದರೂ ಸಹನೆ, ಸಂತೋಷ ಆಕೆಗೆ, ಹರಿಸುವಳು ಮನದುಂಬಿ ಮಮತೆಯನಾ


ಮಣ್ಣಾಗಿ ಹೋದರೂ ಕರುಳ ಕಂದನ ಹರಿಸುವ ಹೃದಯವೇ ನಿನಗೆ ನಮನ....


 


 


ಪ್ರತಿ...........