ಮನದಾಳದ ಮಾತು
ಒಂದರೆಗಳಿಗೆ ನಮ್ಮ ರಾಜಕಾರಣಿಗಳು ತಾವು ರಾಜಕಾರಣಿಗಳಲ್ಲಾ,ಎಂದುಭಾವಿಸಲಿ; ಸಾಹಿತಿಗಳು ತಮ್ಮ ಪೂರ್ವಾಗ್ರಹ ಮರೆತು ಚಿಂತಿಸಲಿ, ಸರ್ಕಾರಿ ನೌಕರರು/ಅಧಿಕಾರಿಗಳು ಯಾರಿಗೂ ಅಂಜದೆ ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಲಿ, ನ್ಯಾಯವಾದಿಗಳು/ಪೋಲೀಸರು ತಮ್ಮ ಆತ್ಮಸಾಕ್ಷಿಯನ್ನು ನೆನಪು ಮಾಡಿಕೊಳ್ಳಲಿ..................
ಈಗ ತಾವು ರಾಜಕಾರಣಿ, ಸಾಹಿತಿ,ಇತ್ಯಾದಿ ಎಂಬುದನ್ನು ಮರೆತು ತಮ್ಮ ಕುಟುಂಬದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ....
೧] ತಮ್ಮ ಕುಟುಂಬವು ಪರಿಪೂರ್ಣ ಆರೋಗ್ಯವಾಗಿ ನೆಮ್ಮದಿಯಿಂದ ಇದೆಯೇ?
೨] ಮಕ್ಕಳೊಡನೆ ಸಂತಸವಾಗಿದ್ದೇವೆಯೇ?
೩] ತಮ್ಮ ಮಕ್ಕಳು ನಿಜವಾಗಿಯೂ ಋಜುಮಾರ್ಗದಲ್ಲಿ ಸಾಗುತ್ತಿದ್ದಾರೆಯೇ?
ನಮ್ಮ ಆತ್ಮಸಾಕ್ಷಿ ಏನು ನುಡಿದೀತು? ಎಲ್ಲವೂ ಉತ್ತಮ ವಾಗಿದೆ, ಎಂಬುವುದಾದರೆ ಈ ಬರಹವನ್ನು ಮುಂದೆ ಓದುವ ಅಗತ್ಯವಿಲ್ಲ.
ಇಲ್ಲವೆಂದಾದರೆ........
೧] ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳಲ್ಲಿ ನಮ್ಮ ಸ್ಥಿತಿ ಹೀಗೇಕೆ?
೨] ನಮ್ಮ ಮೂಲ ಸಂಸ್ಕೃತಿ-ಪರಂಪರೆಗಳನ್ನು ಮರೆಯುತ್ತಾ ಬಂದ ಪರಿಣಾಮವೇ?
೩]ಆಧುನಿಕ ಶಿಕ್ಷಣದ ಅವಾಂತರವೇ?
೪] ವೈಜ್ಞಾನಿಕ ಅನ್ವೇಷಣೆಗಳ ಅತಿ ಅನುಭೋಗದ ಕಾಣಿಕೆಯೇ?
ಹೌದೆಂದಾದರೆ ಪರಿಹಾರವೇನು?
ಎಲ್ಲರೂ ಚಿಂತನ-ಮಂಥನ ನಡೆಸೋಣ. ಎಲ್ಲರ ಮನದಾಳದ ಮಾತುಗಳಿಗೆ ಅಕ್ಷರವನ್ನು ಕೊಡಿ.ಸ್ನೇಹ ಮಿಲನದಲ್ಲಿ ನಾವುಗಳು ಸೇರಿದಾಗ ಈ ಚಿಂತನೆಗಾಗಿ ಒಂದು ಗಂಟೆ ಅವಧಿಯನ್ನಾದರೂ ಮೀಸಲಿರಿಸಿ, ಬೆಂಗಳೂರಿನ ಯಾರಾದರೂ ಚಿಂತಕರನ್ನು ಕರೆಸಿ ಅವರು ನಮ್ಮೆಲ್ಲರ ಮನದಾಳದ ಮಾತುಗಳನ್ನು ಕ್ರೂಢೀಕರಿಸಿದರೆ ಒಂದು ಸೂತ್ರ ಹೊರಬಂದೀತು.
ನೆನಪಿರಲಿ: ಒಂದರೆಗಳಿಗೆ ನಮ್ಮ ಪೂರ್ವಾಗ್ರಹ ಬದಿಗಿರಲಿ. ನಾವು ಮಕ್ಕಳಾಗೋಣ.ಮೆಚ್ಚುಗೆಗಾಗಿಯೂ ಬರೆಯುವುದು ಬೇಡ, ಚುಚ್ಚುವುದಂತೂ ಬೇಡವೇ ಬೇಡ. ನಮ್ಮ ಮಾತು ಬಿಚ್ಚುಮನಸ್ಸಿನಿಂದ ಮಕ್ಕಳ ತೊದಲು ಮಾತಿನಂತಿದ್ದರೂ ಚೆನ್ನ.
[ಈ ವಿಚಾರದಲ್ಲಿ ಚಿಂತನ- ಮಂಥನ ನಡೆದರೆ ಒಳ್ಳೆಯದು ಎಂಬುದು ನನ್ನ ಅಭಿಮತವಷ್ಟೆ. ಆಗ್ರಹವಲ್ಲ]
ಮನವಿ:- ಈ ಚುಟುಕು ಬರಹ ಚೆನ್ನಾಗಿದೆ,ಇತ್ಯಾದಿ ಮಾತುಗಳ ಬದಲು " ನಮ್ಮ ಸಮಾಜವು ಆರೋಗ್ಯಪೂರ್ಣ ವಾಗಬೇಕೆಂದರೆ ದಾರಿ ಯಾವುದು? ನಿಮ್ಮ ಮಾತಿನಲ್ಲಿ ತಿಳಿಸಿ