ಮನದಾಳ
ಕವನ
ನಾ ಕಾಣದ ಇವರು
ನನ್ನ ಕಣ್ಣ ಮುಂದೆಯೇ ಮಾಸಿಹೋಗದ
ಆಚ್ಚಿನಂತೆಯೆ ನನ್ನೆದೆಯಾಳದಲ್ಲಿ
ಸಾಹಿತ್ಯದ ಕಾಂತಿಯ ಅಚ್ಚೊತ್ತಿದ್ದಾರೆ ||
ಬಿಸಿನೆತ್ತರಿನ ನನ್ನಲ್ಲಿ ಸಾಹಿತ್ಯದ ಆಮಲನ್ನು
ಅಂಟಿಸಿ ನೋವನ್ನು ಮರೆಸಿ ಮೆರೆಸಿದ್ದಾರೆ
ಸಾಹಿತ್ಯವೆಂಬ ಹಾಲು ತುಪ್ಪದಲ್ಲಿ
ಕೈತೊಳೆಯೆಂದು ಹರಸಿದ್ದಾರೆ ||
ಕನ್ನಡಾಂಭೆಗೆ ಸೇವೆ ಮಾಡುವ ಸ್ಪಷ್ಟ
ದಾರಿಯ ನಕ್ಷೆ ಎಳೆದಿದ್ದಾರೆ ನನ್ನಲ್ಲಿ
ನಕ್ಷೆಯಂತೆ ನಡೆಯುವೆನೆಂಬ ಧೀಮಂತ
ನಂಬಿಕೆಯಿದೆ ನನ್ನ ಉಸಿರಲ್ಲಿ ||
ನಾನೊಬ್ಬ ಮನುಜನಾಗಿ ಇವರ ಪಥದಲ್ಲೆ
ನಡೆಯಲು ತೊಟ್ಟಿದ್ದೇನೆ ಕಾಲಿಗೆ ಲಾಳ
ಈ ಬಾಳ ಹಸನಾಗಿಸಲು ಆಗಬಾರದು
ಗಾಳದ ಜೀವ ಇದೇ ನನ್ನ ಒಡಲಾಳ ||
ಯಾರಿವರು! ನನ್ನ ಕಣ್ಣಿಗೆ ಕಾಣದವರು
ಹೃದಯಕ್ಕೆ ಹತ್ತಿರವಾದವರು
ಮನುಜಮತ ವಿಶ್ವಪಥ ಎಂದು ಸಾರಿದವರು
ಜಾಞನಪೀಠ ಪುರಸ್ಕೃತ ಕುವೆಂಪುರವರು ||
Comments
ಉ: ಮನದಾಳ
ಕುವೆಂಪುರವರು ನನಗೆ ಸ್ಪೂರ್ತಿ