ಮನದ ಗುಟ್ಟು...
ಬರಹ
ಅವಳ ನೋಡಿದ ಮೊದಲ ದಿನವೇ,
ಚಿಗುರಿತು ಆಸೆ ಮನದಲೊಂದು.
ಆಸೆ ತಿಳಿಸುವ ಪ್ರಯತ್ನ ಪಟ್ಟರೂ,
ಸುಮ್ಮನಿರುತಿತ್ತು ಮನವು ಆ ದಿನದಂದು....
ಹೀಗೆ ಹಲವು ತೊಲಳಾಟಗಳ ನಡುವೆ,
ದೊರೆಯಿತು ಒಂದು ಅವಕಾಶ...
ನಾ ಹೇಳುವ ಮುನ್ನವೇ ಅವಳು ಹೊರಟಿದ್ದಳು,
ಮರಳಿ ನನಗೆ ಸಿಗದಷ್ಟು ಬಹುದೂರ...
ಇಂದೂ ಆ ಆಸೆಯು ಕಾಡುತಿದೆ ಬೆಂಬಿಡದೆ ಯೆನ್ನ,
ಮನಕೆ ದೊರೆಯದು ಶಾಂತಿ, ನಾ ಅವಳಿಗೆ ಹೇಳದೆ ಹೋಗುವ ಮುನ್ನ...!