ಮನದ ತುಡಿತ‌

ಮನದ ತುಡಿತ‌

ಕವನ

ಏನು ಇದೇನು ಅದೇನು ತಲೆಕೆಡಿಸುವ ಆಲೋಚನೆ

ಬಂತು ಬಿಡದಂತೆ ನನಗಂತೂ ಬಗೆಹರಿಯದ ಆಲಾಪನೆ

ಎಲ್ಲಿಂದ ಬಂತೊ ಎದೆಯಲ್ಲಿ ನಿಂತು ಸಿಗಬೇಕು ಅನುಮೋದನೆ

 

ಮನಸೊಂದು ಗೂಡು ನಿನ್ನ ಪ್ರೀತಿ ಹಾಡು ಬರಿದಾಯ್ತು ನನ್ನ ವೇದನೆ

ಕರಿಮೊಡ ಕರಗಿ ಸುಳಿಮಿಂಚು ಗುಡುಗಿ ಚಿಗುರಾಯ್ತು ನನ್ನ ಭಾವನೆ

ನನಗಾಗೆ ತಂದ ಕುಡಿನೋಟವೊಂದ ಮರೆಮಾಚಿ ನೀ ನಿಂತೆಯಾ

ನವಭಾವ ಕೆರಳಿ ಹೊಸರಾಗ ತೊದಲಿ ಮನಬಿಟ್ಟು ನೀ ನಡೆದೆಯಾ

 

ದಿನವೆಲ್ಲಾ ಹಸಿದು ಎದೆ ಪೂರ ಬರಿದು ಬಯಲಾಯ್ತು ನನ್ನ ಕಾಮನೆ

ಕನಸೊಂದು ಉದುರಿ ನನಸಾಗೊ ಲಹರಿ ಛಲವಾಯ್ತು ಬರಿ ಪ್ರೇರಣೆ

ನನ್ನಿಂದ ಒಂದು ಕಣ್ಣೀರ ಬಿಂದು ಹರಿದಾಯ್ತು ನಿನ್ನ್ ಕಾಣದೆ

ಬರಿ ಕನಸಿನಲ್ಲೇ ಮರೆಯಾಗುತಿಹುದು ಈ ಪ್ರೀತಿ ನಿನ್ನ ಸೇರದೇ..

Comments