ಮನದ ತುಡಿತ - ಒಂದು ಗಝಲ್
ಕವನ
ಮೌನವಾದಳು ನನ್ನ ಹುಡುಗಿ ಪ್ರೀತಿ ಸಿಗಲಿಲ್ಲ ಸಾಕಿ
ಚೆಲುವಾಗಿದ್ದಳು ಆದರೇನು ಪ್ರೇಮ ಕೊಡಲಿಲ್ಲ ಸಾಕಿ
ಮುತ್ತುಗಳ ಪೋಣಿಸುತ್ತ ಎನ್ನೆದುರಲ್ಲೇ ಹೋದಳಲ್ಲ
ಕನಸಲ್ಲೇ ಹೊರಟಿದ್ದೆ ನನಸು ಮೂಡಲಿಲ್ಲ ಸಾಕಿ
ಅವಳು ಹತ್ತಿರವಿದ್ದರೆ ತಾನೆ ಬದುಕಿನೊಳು ಉನ್ಮಾದ
ಚೈತ್ರದ ಜೊತೆಗೆ ಸಾಗಿದ್ದರೂ ಸೇರಲಿಲ್ಲ ಸಾಕಿ
ಒಲವಿನ ಹೂವುಗಳು ನನಗೆಂದೂ ಕಂಪ ಕೊಟ್ಟಿಲ್ಲವೆ
ಕೆಂಪೇರಿದ ಗುಲಾಬಿಯಲ್ಲಿಯ ಪಕಳೆಗಳು ಅರಳಲಿಲ್ಲ ಸಾಕಿ
ಈಶನ ಹೃದಯದಾಳಕೆ ಸಖಿ ಇಳಿಯ ಬಾರದೇನೆ
ಕೋಪದ ನಡುವೆಯೂ ಮನದ ತುಡಿತ ಕಾಣಲಿಲ್ಲ ಸಾಕಿ
-ಹಾ ಮ ಸತೀಶ
ಚಿತ್ರ್