*ಮನದ ಭಾವ*
ಕವನ
ಮನದಲಿ ಭಾವವು ಉದಯಿಸಿ ಬರಹದಿ
ಕವನವ ಬರೆಸಿತ್ತು|
ವನದಲಿ ಕೋಗಿಲೆ ಇಂಚರ ಸ್ವರದಲಿ
ನಲ್ಲನ ಕರೆದಿತ್ತು||
ಪರಿಮಳ ಸೂಸುವ ಸುಮವದು ಒಲವಲಿ
ದುಂಬಿಯ ನೆನೆಸಿತ್ತು|
ಹರಿಯುವ ನದಿಯದು ಜುಳುಜುಳು ನಾದದಿ
ಕಲರವ ಮಾಡಿತ್ತು||
ಅರುಣನ ಉದಯವು ಕವಿಗಳ ಹೃದಯಕೆ
ಸ್ಪೂರ್ತಿಯ ತುಂಬಿತ್ತು|
ಕರವನು ಮುಗಿಯುತ ಕಾಳಿಯ ದೇವಿಗೆ
ಚರಣಕೆ ನಮಿಸಿತ್ತು||
ಒಲವಿನ ಬಲೆಯಲಿ ನಲ್ಲೆಯ ಕಂಗಳು
ನಲ್ಲನ ಸೆಳೆದಿತ್ತು|
ಚೆಲುವಿನ ಮೋಹಕ ನಲ್ಲೆಯ ಒಲವಿಗೆ
ಮನವದು ಸೋತಿತ್ತು||
ಲಲನೆಯ ಪ್ರೀತಿಯ ಪಡೆಯಲು ಹೃದಯವು
ಕಾತರಗೊಂಡಿತ್ತು|
ತಲೆಯಲಿ ಯೋಚನೆ ಬರುತಲಿ ಮನವದು
ಸಂತಸ ತಳೆದಿತ್ತು||
-ಶಂಕರಾನಂದ ಹೆಬ್ಬಾಳ
ಚಿತ್ರ್
