ಮನದ ಭಾವನೆ
ಕವನ
ಪ್ರತಿ ದಿನ ತವರಿಗೆ ಹೋಗುತ್ತಿದ್ದೆ!! ಕಾರಣ ಶಾಲೆ ಬಿಟ್ಟು ಸಂಜೆ ನನ್ನ ಮಕ್ಕಳ ಕರೆ ತರಲು
ಪ್ರತಿ ದಿನ ಅಮ್ಮನ ಮಾತಾನಾಡಿಸಿ ಬರುತ್ತಿದ್ದೆ!! ಒಂದು ದಿನ ರಜೆಯ ನಿಮ್ಮಿತ ಮನೆಯಲ್ಲಯೇ ಇದ್ದೆ''
ನನ್ನ ಅಮ್ಮನ ಕರೆ ನೀನು ಯಾಕೆ? ಬಂದಿಲ್ಲ!!
ನಿಮ್ಮಳಿಯ ಬಂದಿರುವರಲ್ಲ, ಒಂದು ದಿನ ಬರದಿದ್ದರೇ ಕರೆ ಮಾಡಬೇಕೆ ಕೇಳಿದೆ
ನನ್ನಮ್ಮನ ನುಡಿ ನಿನ್ನ ಮಗಳನ್ನು ದೂರಕ್ಕೆ ಮದುವೆ ಮಾಡಿಕೊಡು
ಆಗ ತಿಳಿಯುವುದು ನಿನಗೆ ನನ್ನ ತುಡಿತ ಎಂದಾಗ. . . . .
ನನ್ನ ಮೈ ಒಮ್ಮೆ ಜುಮ್ಮೆಂದಿತು
ನಾ ಪ್ರತಿದಿನ ನೋಡಿ , ವಿಚಾರಿಸಿ ಬೇಕಾದ್ದನ್ನು
ನನ್ನಿಂದ ಸಾಧ್ಯವಾದಷ್ಟು ನೋಡಿಕೊಂಡರೂ, ಅಮ್ಮನ ಮನಸ್ಸಿಗೆ ನೆಮ್ಮದಿಯಿಲ್ಲ
ಾದೇಷ್ಟು ಅಪ್ಪ ಅಮ್ಮಂದಿರು ಮಕ್ಕಳು ಇದ್ದು ಅನಾಥರಾಗಿದ್ದರೆ
ಅವರ ಭಾವನೆ, ಕಣೀರು, ತುಡಿತ ಕೇಳದ ಮಕ್ಕಳಿದ್ದಾರೆ.
ಚಿತ್ರ್