ಮನದ ಮಡಿಲಿನ ಆಸೆ
ಬರಹ
ನಿನ್ನಯ ಮನದ ಮಡಿಲಿನ ಮಗುವಾಗಿ
ಏನನ್ನೋ ಹೇಳಬೇಕೆಂಬ ಆಸೆ...
ಆದರೆ ಏನು ಮಾಡೋದು
ನೀನೆ ಇಲ್ಲದ ಮೇಲೆ ಮಡಿಲಿನ ಹಂಬಲವು ಕೂಡ
ಒಂದು ಮರೀಚಿಕೆಯೇ......
ಎಲ್ಲೋ ಮತ್ತೊಮ್ಮೆ ಮಡಿಲು ಸೇರುವ ಸುಳಿವು
ಇನ್ನು ಸುಳಿಯುತ್ತಲಿದೆ ನನ್ನೆದೆಯಲ್ಲಿ
ನಿನ್ನ ಮತ್ತೊಂದು ಸಾರಿ ನೋಡೋ ಆಸೆ......
ನನ್ನಯ ಕನಸಿನ ಶಿಖರದ ಮೇಲೆ
ನಿನ್ನಯ ಕನಸುಗಳಿಗೆ ರೆಕ್ಕೆ ಕಟ್ಟಿ ಹಾರುವಾಸೆ.......
ಕೊನೆ ಕ್ಷಣದವರೆಗೂ ಉಸಿರಾಗುವಾಸೆ............