ಮನಮಿಡಿಯುವ ಚಿತ್ರ...!

ಮನಮಿಡಿಯುವ ಚಿತ್ರ...!

ಇಲ್ಲಿರುವುದು ಅತ್ಯಂತ ವಿಮರ್ಶೆಗೆ ಒಳಗಾದ ಚಿತ್ರ. ಇದನ್ನು ನೋಡಿದ ಬಳಿಕ ಕರುಳು ಹಿಂಡಿದಂತಾಗುತ್ತದೆ. ಮನಸ್ಸು ಮೂಕವಾಗುತ್ತದೆ. ಕಣ್ಣಿನಂಚಿನಲ್ಲಿ ನೀರು ಜಿನುಗುತ್ತದೆ. ಇದು ಸತ್ಯ.

ಇಗೊರ್ ಅಲ್ಟುನಾ ಎಂಬ ಛಾಯಾಗ್ರಾಹಕರ ಈ ಚಿತ್ರ ಲಂಡನ್ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿ 2022ರ ಅತ್ಯುತ್ತಮ ಚಿತ್ರವಾಗಿ ಘೋಷಿಸಲ್ಪಟ್ಟಿದೆ. ಇದು ನಮ್ಮನ್ನು ಹಿಡಿದು ಯೋಚಿಸುವಂತೆ ಮಾಡುತ್ತದೆ.

ಇದು ನಿಜವಾಗಿ ಜೀವನದ ವಾಸ್ತವ. ಈ ವಿಷಯದಲ್ಲಿ ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ, ಬಲಶಾಲಿ ಮತ್ತು ಬುದ್ಧಿವಂತರು ಯಾವಾಗಲೂ ಎಲ್ಲೆಡೆ ಗೆಲ್ಲುತ್ತಾರೆ. ಅವರ ಬಾಯಿಯೊಳಗೆ ನಮ್ಮ ಬದುಕು ಸಿಕ್ಕಿಕೊಂಡಿದ್ದೇ ಗೊತ್ತಾಗುವುದಿಲ್ಲ. 

ತಾಯಿ ಪ್ರಾಣ ಬಿಟ್ಟಿರುವ ಅರಿವಿಲ್ಲದೆ ತಾಯಿಯನ್ನು ತಬ್ಬಿ ಕೊಂಡು ಮಲಗಿರುವ ಮಗುವಿನ ಪರಿಸ್ಥಿತಿ. ಎಷ್ಟೊ ಬಾರಿ  ನಮ್ಮ ನಂಬಿಕೆ ಮತ್ತು ವರ್ತಮಾನದ ನಡುವೆ ಇಂತಹುದೇ ಬಿಕ್ಕಟ್ಟು ಇರುತ್ತದೆ. 

(ಸಂಗ್ರಹ) - ಸಂತೋಷ್ ಕುಮಾರ್, ಸುರತ್ಕಲ್

ಇಂಟರ್ನೆಟ್ ಚಿತ್ರ ಕೃಪೆ