ಮನಮೋಹಕ ಹಾಯ್ಕುಗಳು

ಮನಮೋಹಕ ಹಾಯ್ಕುಗಳು

ಕವನ

*೧.*

ಪೆಟ್ಟು ಬಿದ್ದಿದೆ

ಹೊಟ್ಟೆಪಾಡಿಗೆ;ತಲೆ

ಕೆಳಗಾಗಿದೆ!

*೨.*

ನಾನು ತಾನಾಗಿ

ಹೋಗಿ ಬಿಟ್ಟರೆ; ಬಾಳು

ಚಿನ್ನದ ಬೆಳೆ!

*೩.*

ಗೆದ್ದವರಿಗೆ

ಗೆದ್ದಲು; ಹಿಡಿದರೆ

ಯಶ ವಿನಾಶ!

*೪,*

ಹೊಗಳಿಕೆಯ

ಬಲೆ;ಯಿಂದ ಹೊರಗೆ

ನಿಜ ಗೆಲುವು!

*೫.*

ಬೇರೂರುವುದೇ

ಮರಕೆ ಛಲ; ಬೇರೇ

ಬೇರ್ಪಟ್ಟರೇನು!

- *ಕಾ.ವೀ.ಕೃಷ್ಣದಾಸ್*, ಕೊಂಚಾಡಿ

 

ಚಿತ್ರ್