ಮನವಿ..

ಮನವಿ..

ಬರಹ

"ನನ್ನ ಮರ್ತ್ ಬಿಡೊ!" ಅಂತ ಹೇಳಿ ನೀನ್ ಹಾಗೇ ಹೊರ್ಟ್ ಬಿಟ್ಟೆ...
ತಿರುಗಿ ಸಹಾ ನೋಡ್ಲಿಲ್ಲ...
ನಂಗೊತ್ತು, ಆ ಸಣ್ಣ ಹನಿ ನಿನ್ನ್ ಕಣ್ಣಿಂದಾನೂ ಇಣುಕ್ತಿತ್ತು ಅಂತ...

ನಿನ್ ಹೇಳಿದೆಲ್ಲ ಸರಿ...

ಮುಂದೆ ಇಬ್ಬ್ರಿಗೂ ಕಷ್ಟ, ಇದು practical ಅಲ್ಲ ಅಂತಾ..
ಆದ್ರೂ.....
ಮರೆಯೋದು ಅಷ್ಟು ಸುಲಭಾನಾ ಹುಡುಗಿ?
ಸುಲಭ ಆಗಿದ್ರೆ ಎಷ್ಟೋ ಜನ ಬದುಕಿಬಿಡ್ತಿದ್ರು ಕಣೇ!

ನೆನಪಿದ್ಯಾ? 'ಪ್ರತಿ ಉಸ್ರಲ್ಲೂ ನೀನಿದ್ಯ' ಅಂತ ನಾನ್ ಹೆಳ್ತಿದ್ದೆ.
ಈಗ, ಉಸ್ರಾಡ್.ದೇ ಬದ್ಕು ಅಂತಿದ್ಯಾ!?
ಮನಸಲ್ಲಿ ಕಟ್ಟಿರೋ ಅರಮನೆಯ ಪ್ರತಿ ಇಟ್ಟಿಗೆ ಮೇಲೂ ನಿನ್ ಹೆಸ್ರಿದೆ ಕಣೇ...
ಅದನ್ನ ಒಡೆದು ಬಿಡು ಅಂತಿಯ?!

ಇದು ಸಾಧ್ಯ ಇಲ್ಲ ಅಂತ ಗೊತ್ತು.
ಆದ್ರೂ ಒಂದು ಸಾರಿ ಕೈ ಮುಗಿದು ಕೆಳ್ಕೊಳ್ತಿನೇ....
ಮತ್ತೆ ವಾಪಸ್ ಬಂದ್ ಬಿಡೇ......

-ವೃಕ