ಮನವಿಲ್ಲದ ಮಾನವ

ಮನವಿಲ್ಲದ ಮಾನವ

ಕವನ

ಮನವಿಲ್ಲದ ಮಾನವ

ಮನುಷ್ಯತ್ವ ಮರೆತಂತೆ

ಮರೆವಿನ ರೋಗವೊಂದು

ಒಳಗೊಳಗೆ ಸುತ್ತಿಕೊಂಡಂತೆ

ಮರೆತಿರುವರವರು ಹಿಂದಿನ

ಸ್ನೇಹತ್ವದೊಳಗಿನ ಸಂಕೋಲೆ

ಹೊಸನೀರು ಬಂದಾಗ ಹಳೆನೀರು

ಕೊಚ್ಚಿಕೊಂಡು ಹೋದಂತೆ,

ಹೋಗೇ ಬಿಟ್ಟಿದೆಯಂತೆ ಸತ್ತಂತೆ !!

 

ಇಂದಿನ ನವಯುಗದಲ್ಲಿ

ಹಾಗೆ ಬಂದು ಹೀಗೆ ಹೋಗುವವರೇ

ನಿಜವಾದ ಸ್ನೇಹಿತರು,ಒಳ್ಳೆಯವರು ಹಿತೈಷಿಗಳು ನಮಗಾಗದವರು !

ಮತ್ತೆ ಮೂಡುವುದು ಹೇಗೆ ?

ಇವರು ನಮ್ಮವರು!

ಇವರು ಎಂಥವರು ?

 

ಕವಿಯ ಅನುಭವಗಳೇ

ಅನುಭಾವಗಳು, ಹಿಂದಿನ

ಮಹಾಮಹಿಮರ ಮಾತು

ಕೃತಿಗಳೆಲ್ಲವೂ ಅವರ ಅನುಭವವೇ 

ಅದನ್ನೇ ನಾವು

ಪೂಜ್ಯನೀಯ ಭಾವನೆಯಿಂದ

ನೋಡುತ್ತೇವೆ, ಅದರಂತೆ ನಡೆಯುತ್ತೇವೆ ! ಆದರೆ ಇಂದು

ಏನಾಗಿದೆ ? ಅನುಭವಗಳು 

ಕಾಣೆಯಾಗಿವೆ ಬರಿಯ ಹೇಳಿಕೆಗಳು ದಾಖಲಾಗುತ್ತಿವೆ ! 

ಓದುವರಿದ್ದರೂ ಸಂಘರ್ಷದ

ಹಾದಿಯಲ್ಲಿ ನಾನು ಮೇಲೋ

ನೀನು ಮೇಲೋಯೆಂದು ವಾಸ್ತವ ಮರೆತು 

ಸಾಗುತ್ತಿದ್ದೇವೆ ನೋಡುವವರ ಕಣ್ಣಿಗೆ ವಿಲನ್ ಆಗುತ್ತಿದ್ದೇವೆ !

-ಹಾ ಮ ಸತೀಶ

ಚಿತ್ರ : ಇಂಟರ್ನೆಟ್ ತಾಣದ ಕೃಪೆ

 

ಚಿತ್ರ್