ಮನವು ತುಂಬುತ ಬರಲು…

ಮನವು ತುಂಬುತ ಬರಲು…

ಕವನ

ಮನವು ತುಂಬುತ ಬರಲು

ಜೀವನದ ಚೇತನವು

ಅರಳರಳಿ ಹೊಮ್ಮುತಿದೆ ಬಾಳೆ ಕಡಲು

ತುಂಬಿದೆದೆಯಲಿ ಕನಸು

ನನಸಾಗಿ ಹೊಳೆದಿಹುದು

ನೋವು ಕಳೆಯುತ ಸಾಗೆ ಬಾಳೆ ಕಡಲು

 

ಹಳೆಯ ಬಯಕೆಯು ಹೋಗಿ

ಹೊಸತನದಿ ಒಂದಾಗಿ

ಬಯಕೆ ಹುಟ್ಟಲು ಬದುಕೆ ಬಾಳೆ ಕಡಲು

ತಿಮಿರ ಶಬ್ದದ ಪರಿಯೆ

ಮೈಮನದ ಅಂಜಿಕೆಗೆ

ಬುದ್ಧಿ ಕೂಗುತ ಕರೆಯೆ ಬಾಳೆ ಕಡಲು

 

ಮೈಯ ಒಳಗಿನಾ ಸೋಲು

ಅಳಿಯುತ್ತ ಬರುತಿಹುದು

ಸವಿಯು ಸೇರುತ ಒಸಗೆ ಬಾಳೆ ಕಡಲು

ತಂಪಾದ ಒಲುಮೆಯೊಳು

ಹೊಸ ಭಾವ ಮೂಡಿರಲು

ಪ್ರೀತಿ ಪ್ರೇಮದ ಕೊಡುಗೆ ಬಾಳೆ ಕಡಲು

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್