
ಮೃದು ಮನಸಲಿ
ಮಧುರ ಕನಸಲಿ
ಗೆಳತಿ ನೀನು ಜೊತೆಯಲಿ ಬಂದೆ
ಮಂದಹಾಸ ಬೀರಿ
ಮೌನದ ತದಿಗೆಯಾಗಿ
ಗೆಳತಿ ನೀನು ಮುದ್ದಾಡಲು ಬಂದೆ
ಸ್ನೇಹ ಸುಖದಲಿ
ಹೃದಯ ಕದ್ದು
ಗೆಳತಿ ನೀನು ಪ್ರೀತಿಸಲು ಬಂದೆ
ಸುಂದರ ವರ್ಣದ
ಜಿಂಕೆಯ ನೋಟದಲಿ
ಗೆಳತಿ ನೀನು ಮಿರುಗುತ ಬಂದೆ
ಸ್ನೇಹದ ತೋರಣ
ಪ್ರೀತಿಯ ಸಿಂಧೂರದಲಿ
ಗೆಳತಿ ನೀನು ನನಗಾಗಿ ಬಂದೆ