ಮನಸೂರೆಗೊಳ್ಳುವ ಗಝಲ್ ಗಳು

ಮನಸೂರೆಗೊಳ್ಳುವ ಗಝಲ್ ಗಳು

ಕವನ

ಗಝಲ್ ೧

ಚೆಲುವಿನ ಗಣಿಯವಳು ನೋಡುವ ಬಗೆ ಹೇಗೆ

ಒಲವಿನ ಚಿಟ್ಟೆಯವಳು ಕಾಣುವ ಬಗೆ ಹೇಗೆ

 

ತಂಪಿನ ಸಮಯದಲಿ ಹತ್ತಿರ ನಿಂತಳು ಏಕೆ

ಇಂಪಿನ ಹಾಡಿಗವಳು ಕುಣಿಯುವ ಬಗೆ ಹೇಗೆ

 

ಕಾಣಲಿ ಉನ್ಮಾದದ ಸಮಯ ಕಣ್ಗಳ ನೋಟ

ಬಾನಲಿ ನಡೆಯುವಳು ಸೇರುವ ಬಗೆ ಹೇಗೆ

 

ಅಂದದ ಬೆಳದಿಂಗಳ ರಾತ್ರಿಯ ನಾನು ನೋಡಿದೆನು

ಚೆಂದದ ರೂಪದವಳು ಹಿಡಿಯುವ ಬಗೆ ಹೇಗೆ

 

ಹತ್ತಿರ ಕೈಹಿಡಿದರೋ ಸುಟ್ಟು ಹೋದಾನು ಈಶಾ

ಅತ್ತರೆ ಕಾಯುವಳು ಮುದ್ದಿಸುವ ಬಗೆ ಹೇಗೆ

***

ಗಝಲ್ ೨

 

ಮುತ್ತುಗಳು ಸಿಗಲಿಲ್ಲ ಬದುಕಿಂದ ದೂರ ಸಾಗಿತೇ ಸಾಕಿ

ಚಿತ್ರಗಳು ಬರಲಿಲ್ಲ ಮನವಿಂದು ಹೊರಗೆ ಹಾಕಿತೇ ಸಾಕಿ

 

ಮರೆಯುವ ಸಮಯಕೆ ಹತ್ತಿರವೇ ಬಂದಿರುತ ನಿಂತೆ ಏಕೆ

ದೊರಕುವ ಕಾಮನೆಗೆ ತನುವ ಒಲವಿಂದು ಕಾಡಿತೇ ಸಾಕಿ

 

ಜನುಮವ ಇತ್ತವರ ದಾರಿಯಲೇ ಮರೆತು ಹೋದೆಯಾ ನೀನು

ಕಾರಣ ಕೊಟ್ಟವರ  ಹಾಡಿಯಿಂದ ಪ್ರೀತಿ ಹೋಯಿತೇ ಸಾಕಿ

 

ಮಧುರ ಭಾವನೆಯು ಯಾರಿಗೆ ನೆಮ್ಮದಿಯ ಕೊಡುವುದೇ ಹೇಳು

ಆತುರದ ನಿರ್ಧಾರ ಚೆಲುವಿನಿಂದ ಸೋತು ಮೂಡಿತೇ ಸಾಕಿ

 

ಜೀವನದ ಕನಸುಗಳ ಸವಿಯಿಂದು ಬರದೆಯೆ ಎಲ್ಲಿದೆಯೋ ಈಶಾ

ಕಾಣದೇ ಹೋದ ಪಯಣವಿಂದು ಸತ್ಯಕೂ ಮುಗಿಯಿತೇ ಸಾಕಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್