ಮನಸೆಳೆದ ಸುಚರಿತ್ರಾ
ಹಾಲು ಚೆಲ್ಲಿದಂತಿದ್ದ ವಿಶಾಲವಾದ ಅಂಗಳ. ತಾಯಿಯ ನೀಲಿ ಸೀರೆಯ ಹಿಂದೆ ಅಡಗಿಕೊಳ್ಳುವ ಮುದ್ದು ಮಗುವಿನಂತೆ ಕಾರ್ಮೋಡಗಳಡೆಯಿಂದ ಬೆಳದಿಂಗಳನ್ನು ಚೆಲ್ಲುತ್ತಿರುವ ಹುಣ್ಣಿಮೆ ಚಂದ್ರ. ಈ ಸನ್ನಿವೇಶದಲ್ಲಿ ನನಗೇ ಗೊತ್ತಿಲ್ಲದಂತೆ ನನ್ನ ಕಿವಿ-ಮನಸ್ಸುಗಳನ್ನು ಅವಳು ಸೂರೆಗೊಂಡಳು. ನಂತರ ತಿಳಿಯಿತು ಅವಲ ಹೆಸರು ಸುಚರಿತ್ರಾ ಎಂದು.
ಇದೇನಿದು ಯಾವುದೋ ಪ್ರೇಮಕಥೆ ಅಂದ್ಕೋಬೇಡಿ ಮತ್ತೆ. ಹಿಂದಿನ ತಿಂಗಳು ಸಂಜಯ್ ಸುಬ್ರಮಣ್ಯಂ ಅವರ ಕಛೇರಿಯಲ್ಲಿ ಕೇಳಿದ ರಾಗ. ವಿಶೇಷ ಏನು ಅಂತಿರಾ?? ಇದನ್ನು ನಾನು ಮುಂಚೆ ಕೇಳಿರುವುದು ೨ ಬಾರಿ ಮಾತ್ರ. ಬಹಳ ಅಪರೂಪವಾದ, ಹಾಡಲು ಕಷ್ಟವಾದ ರಾಗ. ಸಂಜಯ ಅವರು ಹೆಚ್ಚು ಕಡಿಮೆ ೧೫ ನಿಮಿಷ ರಾಗಾಲಾಪನೆ ಮಾಡಿ ನಂತರ "ವೇಲುಮಹಿಲುಮೆ" ಎಂಬ ಪಲ್ಲವಿ ಹಾಡಿದರು. ನಮ್ಮ ದಾಸರು ಈ ರಾಗದಲ್ಲಿ "ಹರಿನಾಮದರಗಿಣಿಯು.." ಎಂಬ ದೇವರನಾಮ ರಚಿಸಿದ್ದಾರೆ.
ತಾಂತ್ರಿಕ ಅಂಶಗಳು: ರಾಗ - ಸುಚರಿತ್ರಾ, ೬೭ನೇ ಮೇಳಕರ್ತ ರಾಗ, ಆದಿತ್ಯ ಚಕ್ರ. ಆರೋಹಣ- ಅವರೋಹಣ ಇಲ್ಲಿದೆ (ಮ್ಯೂಸಿಕ್ ಇಂಡಿಯಾ ಆನೈನ್)
http://www.musicindiaonline.com/l/1/s/ragam.293/