*ಮನಸೋತ ರಾಧೆ*( ಕಂದಪದ್ಯ)

*ಮನಸೋತ ರಾಧೆ*( ಕಂದಪದ್ಯ)

ಕವನ

ತಂಪಿನ ನೆಳಲಲಿ ವೇಣುವಿ

ನಿಂಪಿನ ನಾದವನು ಕೇಳಿನಿಂತೆನು ಮುದದಿಂ|

ಕೆಂಪಿನ ಬಣ್ಣದ ಚೆಲುವಲಿ

ಕಂಪನು ಸೂಸುತಲಿ ನಲ್ಲೆ ಕಾದಳು ತಾನುಂ||

 

ಮುರಳಿಯ ನಾದಕೆ ಮನವದು

ಹೊರಳಿತು ಚಣದಲಿಯೆ ತನ್ನಿಗಿಂತವನರಿತಂ|

ತರುಣಿಯ ಮೋಹಕ ಚೆಲುವ

ನ್ನರಿತನು ಮಾಧವನು ಬೆಡಗಿ ರಾಧೆಯ ಮನವಂ||

 

ಶಾಮಲ ವರ್ಣದ ಮಾಧವ

ಕೋಮಲ ತನುವಿನಲಿ ಮುರಳಿ ನುಡಿಸುತಲಲ್ಲಿಂ|

ಧಾವಿಸಿ ಬಂದವು ಗೋವದು

ಗಾವಿಲರಾಗುತಲಿ ನಿಂತು ಬಿಟ್ಟವು ಚಣದೊಳ್||

 

ಗೋಪಿಯ ಮಹಿಮೆಯ ನೋಡಲು

ತೋಪಿನ ಬಳಿಯಲ್ಲಿ ಬಂದು ನೋಡಲು ಮುದದಿಂ|

ಕೋಪವ ತಾಳದೆ ಕುಳಿತನು

ತಾಪಸನಂತೆಯಲಿ ಮೌನ ತಾಳುತ ವನದಿಂ||

 

ಸುಮಧುರ ರಾಗವ ಕೇಳುತ

ತಮವನು ಕಳೆಯುತಲಿ ಮುರಳಿ ಮೋಹವ ಗೆಲುತಂ|

ನಮಿಸುವೆ ನಾದವನಾಲಿಸಿ

ಕಮನದ ಕೃಷ್ಣನಿಗೆ ವಂದಿಸುತ್ತಲಿ ಪೋದಳ್||

 

-*ಶಂಕರಾನಂದ ಹೆಬ್ಬಾಳ* ,ಕನ್ನಡ ಉಪನ್ಯಾಸಕರು

 

ಚಿತ್ರ್