ಮನಸ್ಸಿನ ಕಸಿವಿಸಿ
ಕವನ
ಪ್ರೀತಿಯನ್ನ ಹುಡುಕುತ್ತಾ ಹೋಗಿ ಖಾಲಿ ಕೈಯಲ್ಲಿ ಬಂದೆ
ಪ್ರತಿ ಸಲ ಕಾಡುವ ನೆನಪುಗಳನ್ನು ಅಳಿಸಲು ಹೋಗಿ ಸೋತೆ
ತೀರದಲ್ಲಿ ಕಾಲಿಗೆ ಅಡ್ಡಗಟ್ಟುವ ಅಲೆಗಳನ್ನು ಹಿಡಿಯಲು ಹೋಗಿ ಅತ್ತೆ
ಬರೀ ನಿರಾಸೆಯೇ ಬದುಕಾಯಿತು... ಮೌನವೇ ಸಂಗಾತಿಯಾಯಿತು
ಅಳಲು ಭಯ ಕಾಡುತ್ತಿದೆ ಹೇಡಿ ಅಂತ ಸಮಾಜ ಗೇಲಿ ಮಾಡಬಹುದು
ಆದರೂ ಬಾಳ ಬಂಡಿ ಸಾಗಿಸುವ ಹುಮ್ಮಸ್ಸು...
ಎತ್ತ ಕಡೆ ಸಾಗಿಸುವುದೋ ಈ ಹುಚ್ಚು ಮನಸ್ಸು...