ಮನಸ್ಸಿನ ಭಾವನೆ

ಮನಸ್ಸಿನ ಭಾವನೆ

ಕವನ

ಮನಸ್ಸಿನ ಭಾವನೆ

ಮೂಡಿದ ಸಮಯ

ಕಾಡಿದೆ ನಿನ್ನನು ಓ ಚೆಲುವೆ

ಮೌನಕೆ ಉತ್ತರ

ಮೂಡಲು ಗಳಿಗೆ

ಒಲವಿನ ಕಾಣಿಕೆ ಓ ಚೆಲುವೆ

 

ರಾತ್ರಿಯ ಚಂದ್ರನ

ಹಾಲಿನ ಬೆಳಕಲಿ

ಕಾಣುತಲಿದ್ದೆ ಓ ಚೆಲುವೆ

ಮುಖದಲಿ ನಗುವನು

ತೋರುತಲಿರಲು

ಸ್ವರ್ಗವೆ ಇಳಿದಿದೆ ಓ ಚೆಲುವೆ

 

ಸುಖದೊಳು ಕರಗಿ

ಸವಿದಿದೆ ಸವಿಯ

ತಂಪಿನ ಹೊತ್ತಲಿ ಓ ಚೆಲುವೆ

ಎದೆಯಲಿ ಕಂಡಿಹ

ನೆನಪಿನ ಕವಿತೆ

ನಿನ್ನೊಡಲೊಳಗೆ ಓ ಚೆಲುವೆ

***

ನಿಷ್ಠೆಯಿಂದ 

ಕಲಿತ

ಕಲಿಕೆಗಿಂತ

ಇಂದಿನ 

ದಿನಗಳಲ್ಲಿ 

ವಿರೋಧಿಯ

ಹೇಳಿಕೆಯಿಂದ 

ಕಲಿತ

ಕಲಿಕೆಯೇ

ಶ್ರೇಷ್ಠ 

ಅನಿಸುತ್ತಿದೆ !

-ಹಾ. ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್