ಮನಸ್ಸು-ಪ್ರೀತಿ

ಮನಸ್ಸು-ಪ್ರೀತಿ

ಬರಹ

ಕನಸು, ನನಸು, ಮನಸು ಪ್ರೀತಿ, ಪ್ರೇಮ, ಪ್ರಣಯ, ಮಧುರ ಭಾವನೆಗಳ ಮಿಲನ, ಒಬ್ಬರ ನೆನಪಿನಲ್ಲಿ ಮತ್ತೊಬ್ಬರ ಜೀವನ, ಪ್ರತಿದಿನದ ಕರ್ತವ್ಯದಂತೆ ನಿದ್ದೆಯಿಂದ ಎದ್ದು ಮತ್ತೆ ಮಲಗುವವರೆಗೂ ಅವರ ಚಿಂತೆಯಲ್ಲೆ ಇರುವ ಮಲಗಿದ ಮೇಲು ಅವರ ಬಗ್ಗೆ ಕನಸುಗಳನ್ನು ಕಾಣುತ್ತ ಆತ ಅಥವಾ ಆಕೆ ನನ್ನವನು ನನ್ನವಳು ಎಂದು ಮನಸ್ಸಿನಲ್ಲಿ ಹೃದಯ ಬಡಿದಾಗೆಲ್ಲ ನೆನಪು ಮಾಡಿಕೊಂಡು ದಿನದ ೨೪ ಗಂಟೆಗಳಲ್ಲಿ ಒಂದು ನಿಮಿಷವು ಕೂಡ ಅವರನ್ನು ನೆನೆಯದೆ ಇರದ ಮನ ಮಿಡಿಯುವ ಜೇನ ಸವಿದಂತೆ ಬಾಯಿ ಚಪ್ಪರಿಸುವಂತೆ ಮನವು ಅವರ ನೆನಪನ್ನು ಮೆಲಕು ಹಾಕುತ್ತ ದಿನವಿಡಿ ಕಳೆವವರು ಪೇಮಿಗಳು.

ಸುಮಾರು ೧೫ ರಿಂದ ೧೬ ವರುಷದವರೆಗೆ ಮಕ್ಕಳನ್ನು ಹೆತ್ತು ಸಾಕಿರುವ, ಪ್ರೀತಿಸುವ ತಂದೆ-ತಾಯಿ ಪ್ರೀತಿಯನ್ನೆ ಒಂದು ಕ್ಷಣ ಮರೆಸುವ ಪ್ರೀತಿ ಈ ಹದಿಹರೆಯದಲ್ಲಿ ಉಂಟಾಗುವ ಭಾವನೆಗಳ ಭವನ ಕಟ್ಟುವಂತೆ ಮಾಡುತ್ತದೆ. ಇದು ಎಲ್ಲರಿಗೂ ತಿಳಿದಿರುವ ವಿಷಯ, ಪ್ರತಿಯೊಬ್ಬರಿಗೂ ಉಂಟಾಗುವ ಅಥವಾ ಈ ಘಟ್ಟ ತಲುಪಿರುವ ಅನುಭವವಿರುತ್ತದೆ, ೧೫ ಅಥವಾ ೧೬ ವರುಷ ಈಗ ತುಂಬಿದ್ದರೆ ಈ ಅನುಭವ ಇನ್ನುಂದೆ ಆಗಬಹುದು.

ಒಂದು ಹುಡುಗ ಹುಡುಗಿಯ ನೋಡಿದಾಗ, ಅವಳ ಕಣ್ಣ ನೊಡುತ್ತ, ಅವನನ್ನು ಆಕರ್ಷಿಸಿದ ಆ ಕಣ್ಣುಗಳ ನೋಟದಲ್ಲೆ ಕಳೆದುಹೋಗುವ ಸಂದರ್ಭ ಉಂಟಾಗುತ್ತದೆ. ಮತ್ತೆ ಅದೇ ಹುಡುಗಿಯ ಹಿಂದೆ ಹೋಗುವ ಧೈರ್ಯಕೂಡ ಮಾಡುವಹಾಗೆ ಆಗುತ್ತದೆ. ಮನಸೆಳೆದು ಅಂದವನ್ನು ಎತ್ತಿ ತೋರುವ ಪ್ರಮುಖವಾದ ಅಂಗ ಮುಖಕಮಲದಲ್ಲಿ ಅರಳಿರುವ ಕಣ್ಣು. ಒಬ್ಬ ಹುಡುಗ ಹುಡುಗಿಗೆ ಸೋತು ಅವಳನ್ನು ಮಾತಾಡಿಸಿ, ಅವಳ ನಗುವ ಸಂಪಾದಿಸಿ, ಇವನನ್ನು ನೋಡಿದಾಗಲೆಲ್ಲ ಅವಳು ಕೂಡ ನಗುವ ತೋರಿ ಮಾತಾನಾಡಿಸುವಂತಾದರೆ ಸಾಕು ಹುಡುಗನಿಗೆ ಪ್ರಪಂಚವನ್ನೆ ಗೆದ್ದಷ್ಟು ಆನಂದ. ಮೊದಮೊದಲು ಒಂದು ಹುಡುಗಿಯ ಮಾತಾನಾಡಿಸುವುದು ಎಂದರೆ ಸುಲಭದ ಮಾತಲ್ಲ, ಹೃದಯ ಜೋರಾಗಿ ಬಡಿದುಕೊಳ್ಳುತ್ತದೆ. ನೀವು ನೂರು ಮೀಟರ್ ನಿಮ್ಮ ಶಕ್ತಿಯನೆಲ್ಲ ಬಿಟ್ಟು ಓಡಿ ನಿಂತುಕೊಳ್ಳಿ ನಿಮ್ಮ ಹೃದಯದ ಬಡಿತ ನೀವೆ ಆಲಿಸಬಹುದಲ್ಲವೆ? ಅದೇ ರೀತಿ ಆಗುವುದು ಒಂದು ಹದಿಹರೆಯದ ಹುಡುಗ ಹದಿಹರೆಯದ ಹುಡುಗೆಯನ್ನು ಮಾತಾನಾಡಿಸುವ ಮುನ್ನ.

ಹುಡುಗ ಅಂದುಕೊಂಡಂಗೆಲ್ಲ ಆಯಿತು, ತಾನು ಇಷ್ಟ ಪಟ್ಟಂತೆ ಹುಡುಗಿಯನ್ನು ಮಾತಾನಾಡಿಸಿದ, ಅವಳು ಒಳ್ಳೆಯ ಗೆಳತಿಯಾದಳು, ಸರಿ ಒಳ್ಳೆಯ ಗೆಳತಿಯಾದಳು ದಿನಕಳೆದಂತೆಲ್ಲ ಅವಳ ಒಳ್ಳೆಯ ಗುಣ, ಹೂವಿನಂತ ನಗು, ಮಾತನಾಡಿಸುವ ಶೈಲಿ ಮಾತುಗಳು ಎಲ್ಲವು ತಲೆಯನ್ನು ಕೊರೆಯಲು ಆರಂಭವಾಗುತ್ತದೆ. ಪ್ರೀತಿಯನ್ನು ಅವಳ ಬಳಿ ಹೇಳಿಕೊಳ್ಳುವ ತವಕ, ಹೇಳಿದ ತಕ್ಷಣ ನನ್ನ ಬೈದು ಗೆಳೆತನ ಹಾಳಾಗುವುದೊ ಎಂಬ ನಡುಕ. ಈ ಸಂದರ್ಭದಲ್ಲಿ ಪ್ರೀತಿ ಬಿಸಿ ತುಪ್ಪದಂತೆ ಆಗಿರುತ್ತದೆ. ಹುಡಿಗಿಯನ್ನು ಮಾತಾನಾಡಿಸುವುದರಲ್ಲೆ ಕಾಲ ಕಳೆದರೆ ಈ ಮೇಲಿನ ಸನ್ನಿವೇಶದ್ದಲ್ಲಿ ಸಿಲುಕುವುದಿಲ್ಲ. ಅದರ ಬದಲು ನಿಮ್ಮನ್ನು ನೀವೆ ದಿನನಿತ್ಯ ಪ್ರಶ್ನೆಗೆ ಒಳಪಡಿಸಿಕೊಳ್ಳಬೇಕಾಗ ಬಹುದು ಅಥವಾ ಕಲ್ಪನೆಯ ಲೋಕದಲ್ಲಿ, ಅವಳನ್ನು ಹೀಗೆ ಮಾತಾಡಿಸೋಣ ಹಾಗೆ ಮಾತಾಡಿಸೋಣವೆಂದು ನಿಮ್ಮ ಮನಸ್ಸನ್ನು ನೀವೆ ಕಲುಕಿ, ಇಲ್ಲದ ಸಲ್ಲದ ಯೋಚನೆಗಳಿಗೆ ನಿಮ್ಮ ಮನಸನ್ನು ಬಲಿಕೊಡಬಹುದು. ಧೈರ್ಯ ಬಹಳ ಮುಖ್ಯ ಯಾವುದೇ ವಿಷಯವಾಗಲಿ ಅಥವಾ ಯಾವುದೇ ಸನ್ನಿವೇಶವಾಗಲಿ ತುಂಬಾ ಯೋಚಿಸಿ ಧೈರ್ಯ ಮಾಡಿ ಕಾರ್ಯಸಾಧನೆಯ ಕಡೆ ಗಮನಹರಿಸಬೇಕು. ಜೀವನದಲ್ಲಿ ಧೈರ್ಯ ಬಹಳ ಮುಖ್ಯ ಅದು ಸರಿ ಆದರೆ ಅದು ಆರೋಗ್ಯಕರವಾಗಿರಬೇಕು, ಕ್ರೂರ ಬುದ್ದಿಯ ಕಡೆಗೆ ಸೆಳೆಯದಂತೆ ನಿಮ್ಮ ಧೈರ್ಯ ನಿಮ್ಮ ಹಿಡಿತದಲ್ಲಿರಬೇಕು. ನಿಮಗೆ ಬೇಕಾಗಿದ್ದನ್ನು ನೀವು ಪಡೆಯಬೇಕಾದರೆ ಖಂಡಿತ ಅದು ಸಾಧ್ಯ, ಧೈರ್ಯ ನಿಮ್ಮದಾಗಲಿ, ಏನೇಯಾದರು ಆರೋಗ್ಯಕರವಾಗಿರಲಿ. ಈ ಧೈರ್ಯ ಮಾಡಿದ್ದಲ್ಲಿ ನೀವು ಆಗಲೇ ಹೇಳಿದ ಸನ್ನಿವೇಶದವರೆಗು ಬರುವಿರಿ.

ಈಗ ಹುಡುಗಿಯ ಬಳಿ ಪ್ರೀತಿಯನ್ನು ಹೇಳಬೇಕು, ಇದು ಬಿಸಿ ತುಪ್ಪದ ಹಾಗೆ ಎಂದು ಗೊತ್ತು. ಹೇಳಿದರೆ, ಅವಳ ಸ್ನೇಹ ದೂರವಾಗುವುದು ಎಂಬ ಭಯ, ಹೇಳದಿದ್ದರೆ ಅವಳ ಪ್ರೀತಿ ಪಡೆಯುವುದರಲ್ಲಿ ನಿರಾಶನಾಗುವೆ ಎಂದು ಚಡಪಡಿಕೆ. ಇಲ್ಲಿ ತಾಳ್ಮೆ ಬೇಕಾಗುತ್ತದೆ, ನೀವು ನಿಮ್ಮ ಪ್ರೀತಿ ತಿಳಿಸುವುದನ್ನು ನಿಧಾನ ಮಾಡುವುದರಲಲ್ಲಿ ಅನುಕೂಲ ಅನಾನುಕೂಲವು ಸಾಧ್ಯ. ಅನುಕೂಲವೇನೆಂದರೆ, ನೀವು ಏನೆಂಬುದು ಆಕೆಗೆ ತಿಳಿಯುತ್ತದೆ, ಅವಳಿಗೆ ಏನು ಇಷ್ಟ, ಇಷ್ಟವಿರದಿರುವುದು ಏನು ಎಲ್ಲವೂ ತಿಳಿಯುತ್ತದೆ, ಅದನ್ನು ಅರಿತು ನಡೆದುಕೊಂಡು ಅವಳ ಮೆಚ್ಚುಗೆ ಪಡೆಯಬಹುದು. ಅವಳಿಗೆ ಇಷ್ಟವಾದಂತೆ ನಡೆದುಕೊಂಡು ಅವಳ ಮೆಚ್ಚುಗೆ ಪಡೆಯುವುದರಲ್ಲಿ ನಿಮಗೆ ನಟನೆ ಅನ್ನಿಸಬಹುದು, ನಿಮ್ಮ ಹುಡುಗಿಗಾಗಿ ನೀವು ಬದಲಾದಿರಿ ಹೊರತು ನಟನೆ ಏನಿಲ್ಲ. ಒಂದು ವೇಳೆ ಅದು ನಟನೆ ಮಾತ್ರವೇ ಆದರೆ ಆ ಪ್ರೀತಿ ನಿಮ್ಮ ಬಳಿ ಉಳಿಯುವುದು ಕಡಿಮೆ ಸಮಯ ಮಾತ್ರವೆನ್ನಬಹುದು. ನಿಜ ಪ್ರೀತಿಯೆ ಆದರೆ ಮೆಚ್ಚುಗೆ ಪಡೆಯಲು ನಿಮ್ಮನ್ನು ನೀವು ಬದಲಾಯಿಸಿಕೊಂಡು ನಿಮ್ಮನ್ನು ಆಕೆಯ ಮನಸ್ಸಿಗೆ ಹತ್ತಿರಮಾಡಿಕೊಳ್ಳುವುದರಲ್ಲಿ ಜಯಕಾಣುವಿರಿ.

ನಿಮ್ಮ ಪ್ರೀತಿ ಆಕೆಯ ಬಳಿ ಹೇಳಿದಾಗ, ಅವಳಿಗೂ ಇಷ್ಟವಿದ್ದು ತಕ್ಷಣ ಅಲ್ಲದಿದ್ದರು ಆ ಸಮಯಕ್ಕೆ ನಸುನಗುವ ಬೀರಿ ಒಪ್ಪಿಗೆ ಸೂಚಿಸಬಹುದು. ಆಕೆಯು ನಿಮ್ಮ ಪ್ರೀತಿಗೆ ಹಸಿರು ನಿಶಾನೆ ನೀಡಿದ ತಕ್ಷಣ ನಿಮಗೆ ಎಷ್ಟು ಆನಂದವಾಗುವುದೊ ಅದಕ್ಕು ಹೆಚ್ಚು ಜವಬ್ದಾರಿ ಇನ್ನ ಮುಂದೆ ನಿಮ್ಮದಾಗುತ್ತೆ. ನಿಮ್ಮ ಮನೆಯಲ್ಲಿ ನಿಮ್ಮ ತಂದೆ-ತಾಯಿ ನಮ್ಮ ಮಗನ ಸಂತೋಷವೆ ನಮ್ಮ ಸಂತೋಷ ಎಂದು ತಿಳಿದಿರುವವರಾದರೆ, ಪ್ರತಿಶತ ೯೯ ಭಾಗ ತಂದೆ - ತಾಯಂದಿರು ಹಾಗೆ ಇರುತ್ತಾರೆ, ನೀವು ಯಾವುದಕ್ಕು ಹೆದರುವಂತಿಲ್ಲ, ಆದರೇ ಯೋಚಿಸಬೇಕಾದ್ದು ಬಹಳವಿರುತ್ತದೆ ನಿಮಗೆ ನಿಮ್ಮನ್ನು ನಿಮ್ಮ ಮನೆ ಹಾಗು ನಂಬಿಬರುವ ಹುಡುಗಿ ಈ ಮೊರನ್ನು ತೂಗಿಸಬಲ್ಲಿರ ನಿಮ್ಮ ಕೈಯಲ್ಲಿ ಈ ಮೊರನ್ನು ತೂಗಿಸುವ ಕೈತುಂಬ ಸಂಬಳ ಬರುವ ಕೆಲಸವೊಂದಿದೆಯ ಯೋಚಿಸಬೇಕಾಗುತ್ತದೆ. ಅಲಂಕಾರಕ್ಕೆ, ಐಶರಾಮಿ ಜೀವನದ ಬಗ್ಗೆ ಯೋಚಿಸದೆ ನಿಮ್ಮನ್ನು ಅನುಸರಿಸಿ ನಿಮಗೆ ಇರುವ ಅನುಕೂಲಕ್ಕೆ ಸರಿ ಹೊಂದುವ ಹುಡುಗಿ ನಿಮ್ಮವಳಾಗಿದ್ದರೆ ಸಾಕು ನಿಮ್ಮ ದಾರಿ ಸುಗಮ. ಮನೆಯಲ್ಲಿ ಒಪ್ಪಿಗೆ, ಹುಡುಗಿಯ ಒಪ್ಪಿಗೆ ನಿಮಗಂತು ಮೊದಲೆ ಒಪ್ಪಿಗೆ ಇನ್ನೇನು ಬೇಕು ಅಂದುಕೊಂಡಂತೆ ಬಯಸಿದ ಸ್ವರ್ಗ ನಿಮ್ಮ ಕೈಯಲ್ಲೆ. ಇಷ್ಟು ಸಾಧ್ಯ ಎರಡು ವಿಧದಲ್ಲು ಆಗಬಹುದು, ಹುಡುಗಿ ಮನೆಯವರು ಒಪ್ಪಿ ನಿಮ್ಮ ಜೊತೆ ಕಳುಹಿಸಿಕೊಟ್ಟರೆ, ಒಪ್ಪದಿದ್ದರು ನಿಮ್ಮನ್ನು ಬಿಟ್ಟಿರಲು ಸಾಧ್ಯವಿಲ್ಲ ನೀವೆ ಅವಳ ಜೀವನವೆಂದು ಮುಂದೆ ಮನೆಯವರು ಮದುವೆಮಾಡಿದರು ಅವರನ್ನು ಬಿಟ್ಟು ಇರಲೇಬೇಕಿತ್ತು ಎಂದು ನಿಮ್ಮ ಜೊತೆ ನಡೆದುಬರುವುದು ಆಗಬಹುದು.

ಇಲ್ಲ ನಾನು ನಮ್ಮ ಮಧ್ಯೆ ಇರುವುದು ಬರಿ ಸ್ನೇಹವೆಂದು ತಿಳಿದಿದ್ದೆ ಅಷ್ಟೆ ಎಂದು ಹೇಳುವುದೋ ಅಥವಾ ಒಪ್ಪಿದಮೇಲೆ ಮನೆಯವರ ಮಾತಿಗೆ ಬೆಲೆ ಕೊಟ್ಟು ತಂದೆ - ತಾಯಿಯೆ ನನಗೆ ಮುಖ್ಯವೆಂದು ನಿಮ್ಮನ್ನು ಪ್ರೀತಿಸುವ ಮುಂಚೆ ಅಥವಾ ಪ್ರೀತಿಸಿದ ಮೇಲೆ ನಿರಾಕರಿಸಿದರೆ, ನಿಮ್ಮ ಆತ್ಮವಿಶ್ವಾಸ ನಿಮಗೆ ರಕ್ಷೆ ಹಾಗು ಆಯುಧವಾಗಬೇಕು ಹೇಗೆ ಅಂತೀರ, ಪ್ರೀತಿಸೊ ಮೊದಲೆ ನಿರಾಕರಿಸಿದರೆ ಖಂಡಿತ ನಿಮ್ಮ ನಿಜವಾದ ಪ್ರೀತಿ ಆಕೆಗೆ ಅರ್ಥವಾಗಿಲ್ಲ ಅಥವಾ ಎಲ್ಲ ತಿಳಿದು ಮನೆಯವರ ಭಯ ಇಲ್ಲ ಮನೆಯಲ್ಲಿ ನಂಬಿರೊ ತಂದೆ-ತಾಯಿಗೆ ಮೋಸ ಮಾಡಿದಂತೆ ಎಂದು ಭಾವಿಸುವ ಮನಸ್ಸು ಅವರದು. ಇಷ್ಟು ಮಾತ್ರ ಕಾರಣಗಳಾದರೆ ನಿಮ್ಮ ಬಗ್ಗೆ ಅವಳಿಗೆ ಒಳ್ಳಯ ಅಭಿಪ್ರಾಯವಿದೆ ಆದರೆ ನಿಮ್ಮ ಪ್ರೀತಿಯನ್ನು ಪಡೆಯೊ ಅದೃಷ್ಟ ಅವರಿಗಿಲ್ಲ ಅಷ್ಟೆ. ಪ್ರೀತಿಯಲ್ಲಿ ಯಾರಿಗೆ ಯಾರು ಗುರುವು ಅಲ್ಲ, ಶಿಷ್ಯರು ಅಲ್ಲ. ಅವರೊಳಗಿನ ಪ್ರೀತಿಯೆ ಅವರಿಗೆ ಗುರು, ಧೈರ್ಯ ತಾಳ್ಮೆ ನೀಡಿ ಅವರ ಪ್ರೀತಿಯನ್ನು ಹೇಗಾದರು ಪಡೆಯುವಂತೆ ಮಾಡಲು ಸಾಧ್ಯಾವಾಗೋದು ಖಂಡಿತ ಅವರೊಳಗೆ ಹೂವಿನಂತೆ ಅರಳಿ ಪ್ರೀತಿಯ ಕಂಪನ್ನು ಸೂಸುತಿರುವ ಪ್ರೀತಿಯ ಭದ್ರಕೋಟೆಯನ್ನು ಹೃದಯದಲ್ಲಿ ನಿರ್ಮಿಸಿರುವ ಪ್ರೀತಿಯಿಂದ ಮಾತ್ರ ಸಾಧ್ಯ.

ನಿಮ್ಮ ಎಲ್ಲ ಪ್ರಯತ್ನಗಳನ್ನು ಮೀರಿ, ಪ್ರೀತಿಸೊ ಮುಂಚೆ ಅಥವಾ ಪ್ರೀತಿಸಿದ ನಂತರ ನಿಮ್ಮ ಪ್ರೀತಿ ನಿಮ್ಮಿಂದ ದೂರವಾದರೆ ಅದು ಖಂಡಿತ ಹಣೆಬರಹ, ಅದೆ 'ನನ್ನ ಟೈಮ್ ಸರಿ ಇಲ್ಲ' ಅಂತಾರಲ್ಲ ಹಾಗೆ ನನಗೆ ನಿನ್ನ ಪಡೆಯೊ ಅದೃಷ್ಟ ಇಲ್ಲ ಅಂದುಕೊಂಡು ಸುಮ್ಮನಾಗಬೇಕು ಅಷ್ಟೆ. ನೀವು ಯಾವುದೆ ವಿಶಯವಾಗಲಿ ನಿಮ್ಮ ಪ್ರಯತ್ನ ನೂರು ಪ್ರತಿಶತ ಇರಬೇಕು ಇದ್ದರು ನಿಮ್ಮ ಅದೃಷ್ಟ ಬಹಳ ಮುಖ್ಯ ಪಾತ್ರವಹಿಸುತ್ತದೆ. ಇದು ಪ್ರತಿಯೊಬ್ಬರಿಗು ತಮ್ಮದೇಯಾದ ರೀತಿಯಲ್ಲಿ ವಿಷಯಗಳಲ್ಲಿ ಅನುಭವವಾಗಿರುತ್ತದೆ. ಒಂದು ಉದಾಹರಣೆ ತಗೊಳ್ಳಿ ನೀವು ಪರೀಕ್ಷೆಗೆ ನೂರು ಪ್ರತಿಶತದಷ್ಟು ತಯಾರಿ ನಡೆಸಿದರು, ಪರೀಕ್ಷೆ ಬರೆಯುವಾಗ ೯೯ ಭಾಗ ನಿಮ್ಮ ಕೈಯಲ್ಲಿ ೧ ಭಾಗ ದೇವರ ಕೈಯಲ್ಲಿ ಇರುತ್ತೆ, ಅದೇ ಫಲಿತಾಂಶ ಬರುವ ದಿನ ೧ ಭಾಗ ನಿಮ್ಮ ಕೈಯಲ್ಲಿ ೯೯ ಭಾಗ ದೇವರ ಕೈಯಲ್ಲಿ ಇರುತ್ತೆ. ಇದು ನಿಮಗೆ ಸರಿ ಅನ್ನಿಸುರುತ್ತೆ. ಇದು ನಮ್ಮ ಹೈಸ್ಕೂಲಿನ ಗುರುಗಳಾದ "ವಿಶ್ವೇಶ್ವರಯ್ಯ" ಸರ್ ನಮಗೆ ಹೇಳುತ್ತಿದ್ದ ಮಾತಿದು, ಅವರು ಓದಿನ ಜೊತೆಗೆ ಜೀವನದ ಹಲವು ಕಹಿಸತ್ಯಗಳನ್ನು ಕೂಡ ಹೇಳಿದ ನೆನಪು.

ಹೀಗೆ ಹದಿಹರೆಯದಲ್ಲಿ ಪ್ರೀತಿ ಉಂಟಾಯ್ತು ತುಂಬಾ ವರ್ಷ ಪ್ರೀತಿಸಿದ್ವಿ, ಕೊನೆಗೆ ಅವನು ಅಥವಾ ಅವಳು ಕೈಯಿ ಕೊಟ್ಟ ಅಥವಾ ಕೊಟ್ಟಳು ಎಂದು ಯೋಚಿಸುತ್ತ ವ್ಯರ್ಥಜೀವನ ನಡೆಸಬದಲು ಮುಂದೆ ಇನ್ನು ಚೆನ್ನಾಗಿ ರೂಪಿಸಕೊಳ್ಳಬಹುದಾದ ಹಾದಿಯ ಆದಿಯನ್ನು ಹುಡುಕಬೇಕು. ನಿಜ ಪ್ರೀತಿ ಇಲ್ಲದೆ ಜೀವನವಿಲ್ಲ ನಿಮ್ಮನ್ನು ಪ್ರೀತಿಸಿದ ಅರಿತವರ ಜೊತೆ ಕೂಡಿ ಬಾಳುವ ಜೀವನ ಸ್ವರ್ಗ, ನಾವು ಅಂದುಕೊಂಡಂತೆ ಜೀವನ ನಡೆದಿದ್ದರೆ ಅದು ಬೇರೆಯ ಕಥೆ ಆಗಿರುತ್ತಿತ್ತು ಬಿಡಿ. ಪ್ರ್ಯಾಕ್ಟಿಕಲ್ ಆಗಿ ಯೋಚಿಸಬೇಕು ನಮಗೆ ಸಲ್ಲದ ಪ್ರೀತಿಯನ್ನು ಹುಡುಕಿ ಪಡೆಯುತ್ತೇನೆ ಎಂದು ಕಾಯುವುದರಲ್ಲಿ ಅರ್ಥವಿಲ್ಲ. ಅದೇ ರೀತಿ ಪ್ರೀತಿ ಮಾಡುವುದರಿಂದ ನಮ್ಮ ಗುರಿಗೆ ಅಡ್ಡ ಆಗುತ್ತೆ ಎಂದು ಪ್ರೀತಿಯನ್ನು ಮುಳ್ಳಿನಂತೆ ಕಾಣುವುದು ಸರಿಯಲ್ಲ.

ಪ್ರೀತಿ ಹುಟ್ಟದ ಮನಸ್ಸು, ಸೂರ್ಯನಿಲ್ಲದ ಜಗತ್ತು ಎರಡೂ ಶೂನ್ಯ. ನಾವು ಇಷ್ಟಪಟ್ಟವರು ನಮ್ಮ ಜೊತೆ ಇರದಿದ್ದರೆ ಬದುಕಲಾರೆವು ಎನ್ನುವುದಕ್ಕಿಂತ, ಅವರಿಲ್ಲದೆ ಜೀವನದ ಸ್ವಾರಸ್ಯ ಹುಡುಕುವುದರಲ್ಲಿ ಅರ್ಥವಿಲ್ಲ. ಆದರೆ ಜೀವನಕ್ಕೆ ನೀವು ನಿಮ್ಮದೆ ಆದ ಅರ್ಥ ಕಲ್ಪಿಸಕೊಳ್ಳಬಹುದು.

ಎಲ್ಲರಿಗೂ ಒಳ್ಳೆಯದಾಗಲಿ...

ಕೆ.ಸೋಮಶೇಖರ್, ಬೆಂಗಳೂರು