ಮನುಷನನ್ನು ಹೋಲುವ ಪೆನ್ನು!

ಮನುಷನನ್ನು ಹೋಲುವ ಪೆನ್ನು!

ಪೆನ್ನು ಮನುಷ್ಯನನ್ನು ಹೋಲುತ್ತದೆ ಮನುಷ್ಯನನ್ನು ಆ ದೇವರು ಸೃಷ್ಟಿ ಮಾಡಿದರೆ, ಪೆನ್ನು ಮನುಷ್ಯನ ಸೃಷ್ಟಿ ಆಗಿದೆ. ಪೆನ್ನಿನ ಕ್ಯಾಪ್ ಮನುಷ್ಯನ ತಲೆ ಮತ್ತು ತಲೆಯಲ್ಲಿನ ಕಲೆಯನ್ನು ಪ್ರತಿನಿಧಿಸುತ್ತದೆ. ಪೆನ್ನು ಎಷ್ಟೇ ಬೆಲೆಯುಳ್ಳದ್ದಾಗಿದ್ದರೂ ಸಹ ಪೆನ್ನಿನ ಕ್ಯಾಪ್ ಕಳೆದುಕೊಂಡು ಬಿಟ್ಟರೆ ಆ ಪೆನ್ನನ್ನು ಬಿಸಾಡುವ ಮನಸ್ಸು ಇರುವುದಿಲ್ಲ, ಹತ್ತಿರ ಇಟ್ಟುಕೊಳ್ಳಲು ಆಗದ ಪರಿಸ್ಥಿತಿ ಎದುರಾಗುತ್ತದೆ. ಆದೇ ರೀತಿ ಮನುಷ್ಯ ಎಷ್ಟೇ ಸಿರಿವಂತನಾದರೂ ಸರಿ ಅವನ ಬುದ್ಧಿ ಸರಿಯಾಗಿ ಇಲ್ಲ ಅಥವಾ ಅವನ ತಲೆ ಸರಿಯಾಗಿ ಇಲ್ಲ ಎಂದ ಮೇಲೆ ಅವನಿಗೆ ಯಾವುದೇ ಮೌಲ್ಯ ಇರುವುದಿಲ್ಲ. ಪೆನ್ನಿನ ಮುಂಭಾಗ ಹುಟ್ಟಿನ ಸಂಕೇತವಾದರೆ ಪೆನ್ನಿನ ಹಿಂಭಾಗ ಸಾವಿನ ಸಂಕೇತವಾಗಿರುತ್ತದೆ. ಪೆನ್ನಿನ ಹೊರ ಕವಚವು ಮಾನವನ ದೇಹವನ್ನು ಹೋಲುತ್ತದೆ. ಪೆನ್ನಿನ ಒಳಗಿನ ರಿಫೀಲ್ ಕಡ್ಡಿಯು ಮನುಷ್ಯನ ಆತ್ಮವನ್ನು ಹೋಲುತ್ತದೆ. ಆಯಸ್ಸು ಮುಗಿದ ನಂತರ ಆತ್ಮವು ಹೇಗೆ ದೇಹವನ್ನು ಬದಲಾವಣೆ ಮಾಡತ್ತದೆಯೋ ಅದೇ ರೀತಿ ಪೆನ್ನಿನ ಆತ್ಮದಂತಿರುವ ರಿಫೀಲ್ ಕಡ್ಡಿ ತನ್ನೊಳಗಿನ ಇಂಕ್ ಎಂಬ ಆಯಸ್ಸು ಮುಗಿದ ನಂತರ ಪೆನ್ನಿನಿಂದ ದೂರವಾಗುತ್ತದೆ. ಅದೇ ಪೆನ್ನಿನಿಂದ ಬರೆಯುವ ಬರವಣಿಗೆ ನಮ್ಮ ಜೀವನದ ಸಂಕೇತವಾಗಿರುತ್ತದೆ. ಹೇಗೆ ಪೆನ್ನಿನಿಂದ ಒಳ್ಳೆಯ ವಿಚಾರಗಳನ್ನು ಬರೆಯಬಹುದು ಮತ್ತು ಕೆಟ್ಟ ವಿಚಾರಗಳನ್ನು ಸಹ ಬರೆಯಬಹುದು ನಮ್ಮ ಬದುಕು ಸಹ ಬದುಕುವ ರೀತಿಯನ್ನು ಒಳಿತು ಕೆಡುಕುಗಳೆಂದು ವಿಂಗಡಿಸಬಹುದು. ಆದರೆ ಒಂದು ವಿಚಾರ ಗಮನಿಸಿ, ಮನುಷ್ಯ ಉಸಿರಾಡುವ ತನಕ ಮಾತ್ರ ಅವನಿಗೆ ಮೌಲ್ಯ. ಸತ್ತ ನಂತರ ಅವನಿಗೆ ಯಾವುದೇ ರೀತಿಯ ಮೌಲ್ಯ ಇರುವುದಿಲ್ಲ. ತನ್ನ ಹೆಸರನ್ನು ಕಳೆದುಕೊಂಡು ಹೆಣ ಎಂಬ ನಾಮವನ್ನು ಪಡೆದು ಸ್ವಂತದ ಸೂರಿನಡಿ ಇರಲು ಸ್ಥಳ ಇಲ್ಲದೇ ಆರಡಿ ಮೂರಡಿ ಅರಮನೆಯನ್ನು ಸೇರುತ್ತಾನೆ. ಆದರೆ ಪೆನ್ನು ಮರುಬಳಕೆಯಾಗುತ್ತದೆ ಅದಕ್ಕೆ ತಿಳಿದವರು ಹೇಳುವುದು ಅರಿತು ನಡೆ ಗುರಿಯ ಕಡೆ ಎಂದು. 

-ತುಂಬೇನಹಳ್ಳಿ ಕಿರಣ್ ರಾಜು ಎನ್

ಚಿತ್ರ ಕೃಪೆ: ಇಂಟರ್ನೆಟ್ ತಾಣ