ಮನುಷ್ಯನಾಗಿ ಬಾಳು (ತತ್ವಪದ)
ಕವನ
ಮಾನವನಾಗಿ ಹುಟ್ಟಿದ ಮ್ಯಾಲೆ
ಮನುಷ್ಯನಾಗಿ ಬಾಳೋದು ಕಲಿ|
ನರಜನ್ಮ ತಾಳಿದ್ದು ಪುಣ್ಯವಂತೆ
ಪ್ರಾಣಿಗಳಲ್ಲಿಯೇ ಉತ್ತಮವಂತೆ||
ಯಾತಕೆ ಎಗರಾಡ್ತಿ ಅಣ್ಣಯ್ಯಾ
ಹಸಿದ ಹೆಬ್ಬುಲಿ ಸ್ವಭಾವದ್ಹಂಗೆ|
ನಾಲ್ಕು ದಿನದ ಬಾಳುವೆಯಂತೆ
ಕೊಟ್ಟು ತಗೊ ಅಭ್ಯಾಸ ಮಾಡ್ಕೊ||
ಕುರ್ಚಿ ಕೆಳ್ಗೆ ಕಾಣದ ಕೈಗಳ ಆಟ
ಕಛೇರಿಯಲ್ಲಿ ಲಂಚದಾ ಅವತಾರ |
ಎದುರಿಗೆ ಬಾರರು ಕುತ್ತಿಗೆ ಸೀಳ್ವರು
ಜೇಬನು ತುಂಬಿ ಸ್ವಾರ್ಥದಿ ಮೆರೆವರು||
ಪ್ರಾಯದ ಮಿತಿಯು ಇದಕಿಲ್ಲವಲ್ಲ
ಹಸುಳೆ ಮುದುಕಿ ಭೇದವಿಲ್ಲ|
ಹೆಣ್ಣಿನ ಸೆರಗು ಕಂಡರೆ ಸಾಕು
ಜೊಲ್ಲನು ಸುರಿಸೋ ಕಂಟಕರು||
ಸ್ವಾರ್ಥದ ಸೌಧ ಕಟ್ಟಿಹರಲ್ಲ
ಹಸಿರ ಸಿರಿಯನು ಬಾಚಿಹರಲ್ಲ|
ಬಡವನ ಹೊಟ್ಟೆಗೆ ಬಡಿದಿಹರಲ್ಲ
ತಮ್ಮ ಹೊಟ್ಟೆಯ ಬೆಳೆಸಿಹರಲ್ಲ||
ಹೊತ್ತ ತಾಯಿಗೆ ದ್ರೋಹವ ಮಾಡುತ
ಹಾಲುಂಡ ಎದೆಗೆ ವಿಷವನು ಕಕ್ಕುತ|
ಹಿರಿಯರೆಲ್ಲರ ಸಸಾರ ಮಾಡುತ
ಪಾಪ-ಪುಣ್ಯ ಎಣಿಸದೆ ಹೋದೆ||
-ರತ್ನಾ ಕೆ ಭಟ್, ತಲಂಜೇರಿ
ಚಿತ್ರ ಕೃಪೆ ಇಂಟರ್ನೆಟ್ ತಾಣ
ಚಿತ್ರ್
