ಮನು ಮತ್ತು ಮನುಷ್ಯತ್ವ
ಕವನ
ಯಾರಿಗೆ ಈ ಮನ್ನಣೆಯೊ
ಯಾರಿಗೆ ಈ ವೇದನೆಯೊ
ಅಲೆಯಲೆಯಲಿ ತೇಲಿ ತೇಲಿ
ಬರುತಲಿದೆ ಮಹಾಮಾರಿ
ಯಾರ ಜೀವಕೆ ಯಾರ ಬೇಲಿ
ತೆಗೆದು ದೂರ ಕಳಿಸಲಿ
ಸದ್ದಿಲ್ಲದೆ ಏರುತಿದೆ
ಸಂಕಷ್ಟಕೆ ದೂಡುತಿದೆ
ಹೆಚ್ಚಾಗಿದೆ ನೋವಿನಲೆ
ಬರಡಾಗಿದೆ ಬಾಳ ಸೆಲೆ
ಗುಣವಿದ್ದರು ಸುಖವಿಲ್ಲವು
ಸಹಕಾರದ ನಡೆಯಿಲ್ಲವು
ಯಾರ ಬಳಿಯೂ ಬಲವಿಲ್ಲವು
ಬಾಲ ಪ್ರಭೆಗೆ ಮುಸುಕೆಲ್ಲವು
ಸರಕಾರವೆ ಕಣ್ತೆರೆಯಲಿ
ಬೇಗ ಇತ್ತ ಗಮನ ಹರಿಸಲಿ
ಜನರ ಜೀವಕೆ ಬೆಲೆ ಕೊಡಲಿ
ಮಹಾಮಾರಿಯ ಒದ್ದು ಓಡಿಸಲಿ
***
ಗಝಲ್
ಮನದಲಿ ಮೂಡಿದೆ ಗೆಳತಿಯೆ ಬಯಕೆಯು ಸಾವಿರ
ತನುವಲಿ ಕಾಡಿದೆ ಒಲವಿನ ಧಾರೆಯು ಸಾವಿರ
ಚೆಲುವಲಿ ಹಾಡಿದ ರೀತಿಯ ಅರಿತೆಯ ಬದುಕಲಿ
ಸಿಗುತಲಿ ಸಾಗಿದೆ ಆಗಸ ತಾರೆಯು ಸಾವಿರ
ಚಂದ್ರನ ಸನಿಹಕೆ ಹಾರುತ ಹೋಗಲೆ ಈಗಲೆ
ನೆಚ್ಚಿನ ತಾಣಕೆ ತಲುಪುವ ಚಿಂತೆಯು ಸಾವಿರ
ಮಂತ್ರದ ಸಂಗಡ ಸೇರುತ ಬರಲೇ ಸವಿಯಲು
ಚೆಂದದ ತನುವಿಗೆ ಹೂವಿನ ಕಂತೆಯು ಸಾವಿರ
ಚಿಮ್ಮಿದ ಬದುಕಿಗೆ ಈಶನ ಮಧುರದ ಮಿಲನವು
ತಬ್ಬಿದ ಬೆಸುಗೆಗೆ ಒಲವಿನ ಶೋಭೆಯು ಸಾವಿರ
-ಹಾ ಮ ಸತೀಶ, ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್