ಮನು ಮತ್ತು ಮನುಷ್ಯತ್ವ

ಮನು ಮತ್ತು ಮನುಷ್ಯತ್ವ

ಕವನ

ಯಾರಿಗೆ ಈ ಮನ್ನಣೆಯೊ

ಯಾರಿಗೆ ಈ ವೇದನೆಯೊ

 

ಅಲೆಯಲೆಯಲಿ ತೇಲಿ ತೇಲಿ

ಬರುತಲಿದೆ ಮಹಾಮಾರಿ

ಯಾರ ಜೀವಕೆ ಯಾರ ಬೇಲಿ

ತೆಗೆದು ದೂರ ಕಳಿಸಲಿ

 

ಸದ್ದಿಲ್ಲದೆ ಏರುತಿದೆ

ಸಂಕಷ್ಟಕೆ ದೂಡುತಿದೆ

ಹೆಚ್ಚಾಗಿದೆ ನೋವಿನಲೆ

ಬರಡಾಗಿದೆ ಬಾಳ ಸೆಲೆ

 

ಗುಣವಿದ್ದರು ಸುಖವಿಲ್ಲವು

ಸಹಕಾರದ ನಡೆಯಿಲ್ಲವು

ಯಾರ ಬಳಿಯೂ ಬಲವಿಲ್ಲವು

ಬಾಲ ಪ್ರಭೆಗೆ ಮುಸುಕೆಲ್ಲವು

 

ಸರಕಾರವೆ ಕಣ್ತೆರೆಯಲಿ

ಬೇಗ ಇತ್ತ ಗಮನ ಹರಿಸಲಿ

ಜನರ ಜೀವಕೆ ಬೆಲೆ ಕೊಡಲಿ

ಕಾರ್ಮಿಕರ ನೋವನು ಒದ್ದು ಓಡಿಸಲಿ

***

ಗಝಲ್

 

ನಿನ್ನ ಪಿಸುಮಾತುಗಳು ಎನ್ನ ಎದೆಯ ಒಡೆಯದಿರಲಿ ಗೆಳತಿ

ನನ್ನ ಮೌನಗಳು ನಿನ್ನ ಕಾಡದಿರಲಿ ಗೆಳತಿ

 

ಸಂಬಂಧಗಳು ಹಸಿಯಿರುವಾಗಲೆ ಕೈಯ ಹಿಡಿಯಲೇನು ನಿನ್ನ

ಮತ್ತಿರುವಾಗಲೇ ಮುತ್ತಿನ ಮಳೆಯ ಸುರಿಸುತಿರಲಿ ಗೆಳತಿ

 

ಉಪವಾಸದ ನಡುವೆಯೂ ಮೃಷ್ಟಾನ್ನದ ಚಿಂತೆಯೇಕೆ ನಿನಗೆ

ಕನಸಿರುವಾಗಲೇ ನನಸಿನತ್ತ ಮನವು ಸಾಗುತಿರಲಿ ಗೆಳತಿ

 

ಲಾವಣ್ಯದ ಬದುಕಿನೊಳು ಸೌಂದರ್ಯ ಅರಳಿ ಸುವಾಸನೆ ಬೀರಲಿ ಬಿಡು

ಶಾಂತ ಸಾಗರದಂತಿರುವ ತನುವು ಕೆಂಪಗಾಗುತಿರಲಿ ಗೆಳತಿ

 

ಈಶನ ಕೃಪಾಸಮುದ್ರದೊಳಗೆ ಈಜಾಡುತ್ತಿರುವೆಯೆಂದು

ಚಂದ್ರಮನ ಹಾಲುಬೆಳದಿಂಗಳು  ನಿನ್ನ ಮೋಹವನು ಅಸ್ವಾಧಿಸುತಿರಲಿ ಗೆಳತಿ

 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್