ಮನೆಪಾಠ

ಮನೆಪಾಠ

ಬರಹ

ಪುಟ್ಟನು ಬಂದ ಮನೆಯೊಳಗೆ
ಸಕ್ಕರೆ ಕಂಡ ಡಬ್ಬದೊಳಗೆ
ಅಮ್ಮನು ಎಲ್ಲೂ ಕಾಣದಿರಲು
ಮೆಲ್ಲನೆ ಕೈ ಡಬ್ಬದಲಿ ಇಳಿದಿರಲು

ಸಕ್ಕರೆಯ ಸವಿಗಾಗಿ ಪುಟ್ಟ ಕಾದಿರಲು
ಬಾಗಿಲ ಬಳಿ ಏನೋ ಸದ್ದಾಗಲು
ಅತ್ತಿತ್ತ ನೋಡದೇ ಮುಷ್ಟಿಗೆ ಸಕ್ಕರೆ ಬಂದಿರಲು
ಗಬಕ್ಕ್ ಎಂದು ಅದು ಬಾಯ ಸೇರಿರಲು

ಇವನಂತೆಯೇ ಸವಿಗಾಗಿ ಬಂದಿಹ ಇರುವೆ
ಇವನಿಗಿಲ್ಲ ಅದಿರುವ ಪರಿವೆ
ಎಳಸು ಬೆರಳು ಸಿಕ್ಕಿ ಇರುವೆ ಕಚ್ಚಿರಲು
ನೋವಿನಿಂದ ಹಾ ಎಂದು ಪುಟ್ಟ ಕೂಗಿರಲು

ಬಾಗಿಲ ಹಿಂದಿನಿಂದ ಅಮ್ಮ ಬಂದಳು
ಕಳ್ಳ ಅಮ್ಮನ ಕೈಗೆ ಸಿಕ್ಕಿ ಬಿದ್ದನು
ಅಮ್ಮನ ಹಿಡಿತಕೆ ಸಿಕ್ಕು ಹೆದರಿ ಅತ್ತಿದ್ದ
ತಲೆ ಸವರಲು ನೋವನೆಲ್ಲ ಮರೆತಿದ್ದ