ಮನೆ ಮನವ ಮೀರಿ

ಮನೆ ಮನವ ಮೀರಿ

ಕವನ

ಮನ ಮನದೊಳಗಿನ ಧರ್ಮವನು

ಮನೆಯೊಳಗಿಟ್ಟು ಹೊರಬನ್ನಿ

ಯಾವುದೆ ಜಾತಿಯ ಪಂಥವನು

ಮೀರಿದ ಭಾವದಿ ಹೊರಬನ್ನಿ

 

ಸೃಷ್ಟಿಗೆ ಯಾವುದೆ ಭೇದವು ಇಲ್ಲ

ನಮ್ಮೊಳೆ ತುಂಬಿದೆ ನೋಡಿಲ್ಲಿ

ಹಗೆತನ ಬಿಡದೆಲೆ ಬಾಳುವೆ ಇಲ್ಲ

ಎನ್ನುವ ಸತ್ಯದಿ ಬದುಕಿಲ್ಲಿ

 

ಕಷ್ಟವೇ ಬರಲಿ ನಷ್ಟವೇ ಇರಲಿ

ಕೈ ಕೈ ಹಿಡಿದು ನಡೆಯಿಲ್ಲಿ

ಎಲ್ಲರೂ ಒಂದೆ ಎನ್ನುತ ತನುವಲಿ

ನೆಮ್ಮದಿ ಬದುಕನು ಕಾಣಿಲ್ಲಿ

 

ಭಾರತ ನೆಲದಲಿ ಜನಿಸಿದ ನಾವು

ಅನ್ಯರ ನೆಲದಲಿ ಬಾಳುವುದೆ

ಇಲ್ಲಿಯೆ ನೆಮ್ಮದಿ ಕಾಣುವ ನಾವು

ಸಂತಸ ಇರುವುದು ಐಕ್ಯದಲೆ 

-ಹಾ ಮ ಸತೀಶ ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ 

ಚಿತ್ರ್