ಮನೋಮಯಿ

ಮನೋಮಯಿ

ಕವನ

ಹುಣ್ಣಿಮೆ ಚಂದಿರ ಬಲು ಚೆಂದ

ತರುವುದು ಮನಕದು ಆನಂದ

ತಂಪಿನ ಕಂಪಲಿ ಚಂದಮನು..

ಮನದ ಭಾವನೆಗಿವ ಒಡೆಯನು.!

 

ತಂಪಿನ ಸೊಂಪದು ಸುಳಿಗಾಳಿಯಲಿ

ಹಸಿರು ಸಿರಿಯೊಡನೆ ನಲಿಯುತಲಿ...

ಮನದಣಿಯ ಮುದದಲಿ ಆಡುವನು

ಭೂರಮೆಗೆ ಹರುಷನವ ತುಂಬುವನು.

 

ಬಾನಲಿ ಬೆಳಗುವ ಬೆಳ್ಳಿಯ ದೀಪ

ಸೂಸುವ ಪ್ರಭೆಯಲಿ ಶಾಂತಿಸ್ವರೂಪ

ಹಗಲಿನ ರವಿಯ ತಾಪದ ಉರಿಯು

ಇರುಳಲಿ ಉಲ್ಲಾಸದ ಚಂದಮ ಸಿರಿಯು.

 

ಮಕ್ಕಳ ಪ್ರೀತಿಯ ಚೆಂದದ ಮಾಮ

ತುತ್ತು,ತುತ್ತಿನ ತುಪ್ಪನ್ನದಲ್ಲಿ ಸೋಮ

ಮನದ ಗೂಡೊಳಗೆ ಅಡಗಿಹನು....

ಭಾವದೊಳಗೆ ಕೂಡಿ ಬಂಧನದಲ್ಲಿಹನು.

 

ಚಂದಮನೊಡಲಲಿ ಮುದ್ದಿನ ಮೊಲವು

ಕಣ್ಮನದಲಿ ಮಿನುಗುವ ಮೋಹಕ ಚೆಲುವು

ಪಾಡ್ಯದಿಂದ ಬೆಳೆಯುತ ಬಗೆಬಗೆಯಲ್ಲಿ

ಪೂರ್ಣತೆಯಲ್ಲಿ ನಗುವನು ಹುಣ್ಣಿಮೆಯಲ್ಲಿ.

 

-ವೀಣಾ ಕೃಷ್ಣಮೂರ್ತಿ, ದಾವಣಗೆರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್