ಮನ್ನಿಸಿಬಿಡು ಗೆಳತಿ ಮೌನವ ಮುರಿದು
ಕವನ
ಹೇಳು ಗೆಳತಿ ಕಾರಣವೇನು ನಿನ್ನ ಕೋ
ಸದಾ ಮುಗುಳ್ನಗು ಬೀರುವ ಆ ಮೊಗದಿ
ನುಸುಳಿರುವ ಆ ಕೋಪಕೆ ಕಾರಣವೇನು
ಆ ನಿನ್ನ ಮೊಗದಿ ನಗುವಿರದಿದ್ದರೆ
ಸಂತೋಷವಿರದು ಈ ನನ್ನ ಮನಕೆ
ನಕ್ಕು ಬಿಡು ಒಮ್ಮೆ ಗೆಳತಿ ಆ ಕೋಪವ ತೊರೆದು
ಪಟಪಟನೆ ಮಾತು ಉದುರಿಸುತ್ತಿದ್ದ
ನಿನ್ನ ಆ ಮೃದು ಮಧುರ ತುಟಿಗಳು
ಇಂದೇಕೆ ಶರಣಾಗಿದೆ ಗಾಢ ಮೌನಕೆ..
ಅರಿಯದೆ ನಾನೇನಾದರೂ ಘಾಸಿ
ಉಂಟು ಮಾಡಿದ್ದರೆ ಆ ನಿನ್ನ ಮನಕೆ
ಮನ್ನಿಸಿಬಿಡು ಗೆಳತಿ ಮೌನವ ಮುರಿದು...
ಗೆಳೆಯ, ಘಾಸಿಯೂ ಇಲ್ಲ ಕೋಪವೂ ಇಲ್ಲ
ನನ್ನ ಮೌನಕೆ ಕಾರಣ ತಡೆಯಲಾರದಷ್ಟು
ನೋವು ಕೊಡುತ್ತಿರುವ ನನ್ನ ದಂತ ಪಂಕ್ತಿಗಳು...