ಮನ್ವಂತರದ ಹಾದಿ

ಮನ್ವಂತರದ ಹಾದಿ

ಕವನ

ಯಾರದೊ ಹಾಡಿಗೆ

ಯಾರದೊ ತಾಳಕೆ

ಇನ್ಯಾರದೊ ಮೇಳದ ಹಿಮ್ಮೇಳಕೆ 

ಕಾರಣವ ತಿಳಿಯದೆ

ಹೊರಟಿದ್ದೆ ಹೊರಗಡೆಗೆ

ಮತ್ತೊಂದು ದಿಕ್ಕಿನ ಊರೊಳಗೆ

 

ಊರ ಬಾನಿನ ತುಂಬಾ

ಕಪ್ಪು ಮೋಡಗಳೆ ತುಂಬಿ

ಅಣಕಿಸುತ ನಕ್ಕವು ನನ್ನನ್ನೆ ನೋಡಿ

ಹಾಸ್ಯವನು ಪಣವಾಗಿ

ಸ್ವೀಕರಿಸಿ ಮುನ್ನಡೆದೆ

ಇಂದು ಬಹುಮಂದಿಯಲಿ ಒಬ್ಬನಾಗಿ

 

ಪರವೂರ ಜನವದುವು

ಮೆಚ್ಚುತಲೆ ಕೈಹಿಡಿದು

ಜೀವನಕೆ ದಾರಿಯನು ತೋರಿಸಿದರು

ಉರಿವರೂ ಉರಿದರು

ಬೂದಿಯಾಗುವ ತನಕ

ನನಗಂತು ಇದರಿಂದ ಒಳಿತಾಯಿತು

 

ಜೊತೆಗಾತಿ ಬಂದಾಗ

ಬದಲಾದ ಜೀವನದಿ

ಹೊಸ ತನವ ಕಂಡಾಗ ಖುಷಿಯಾದೆನು

ಮತ್ತೆ ಗೆಳೆಯರ ನಂಟು

ಚೈತನ್ಯ ಕೊಟ್ಟಿರಲು

ಬರವಣಿಗೆ ಲೋಕದಲಿ ಬೆಳಕಾದೆನು

 

ಹೀಗೆ ಸಾಗುತಲಿರಲು

ವಾತ್ಸಲ್ಯ ಸವಿ ಜೇನು

ಮನದೊಳಗೆ ಮಂದಿರದ ಭಾವನೆಗಳು

ಕನಸು ನನಸಿನ ನಡುವೆ

ತನುವಿನಾಳದ ಬೆಸುಗೆ

ಜೀವನದ ದಾರಿಯಲಿ ಹೊಸ ಬಂಧವು

-ಹಾ ಮ ಸತೀಶ

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್