ಮನ ಒಡೆದರೆ... ಮತ್ತೊಂದು ಕವನ
ಮನವು ಒಂದು ಸುಂದರ
ಕನ್ನಡಿಯೊ ಗೆಳೆಯ
ನಮಗಾಗಿ ನಮ್ಮ ಎಡಬಲ
ಬದಲಿಸುವುದು ತಿಳಿಯ
ನಮ್ಮ ಮನ ಒಡೆಯದ
ತಿಳಿಯಾದ ಕನ್ನಡಿಯೊ ಮನುಜ
ಒಮ್ಮೆ ಒಡೆದರೆ ಅದರಲಿ
ನೀ ನೋಡುವೆ ಬಿಂಬದಾ ಕಣಜ
ತಿಳಿಯಾದ ಕೊಳಕ್ಕೆ ಸಣ್ಣಗೆ
ಕಲ್ಲೊಂದು ಬಿದ್ದಾಗ ಏಳುವ ಸುರುಳಿ
ಅಲೆಗಳಂತೆ ಛಿದ್ರವು ಕಣ್ಣಿಗೆ
ಕಾಣುದಂತೆ ಮನ ಬಿರುಕು ಮರುಳೆ
ಮನ ಒಮ್ಮೆ ಕದಡಿದರೆ
ಹೃದಯದ ಭಾವಗಳು ಅರಿಯದಲೆ
ನಮ್ಮ ಆಚಾರವಿಚಾರಗಳು
ಒಡೆದ ಕನ್ನಡಿಯಲಿನ ಬಹುಬಿಂಬಗಳು
ಮನದಲೊಮ್ಮೆ ಮಲಿನ
ಅನುಮಾನ ಸುಳಿದರೂ ಆದರಲಿನ
ನಮ್ಮ ಒಲವು ನಲಿವುಗಳು
ರಾಡಿಯಾದ ಕೊಳದ ನೀರಿನ ಕಣಗಳು
***
ಅಕ್ಷರದ ತಾಯಿ ಶಾರದೆ
ನನ್ನಾ... ಬಾಳ ಬಾಂದಳದ
ಅಕ್ಷರದ ತಾಯಿ ಶಾರದೆ
ನನ್ನಾ... ಬದುಕು ಪಾವನದ
ಅಕ್ಷರದ ತಾಯಿ ಶಾರದೆ ...!ಪ!
ನಿನ್ನಿಂದ ನನಗೆ ಹೆಸರು ಶಾರದೆ
ನನ್ನ ಉಸಿರಲ್ಲಿ ಉಸಿರಾದೆ ತಾಯಿ
ಮನದಲ್ಲಿನ ಕಲ್ಪನೆ ನೀನು ಶಾರದೆ
ಕವನದಲ್ಲಿ ಕವನ ನೀನಾದೆ ತಾಯಿ
ಎಲ್ಲೆಲ್ಲು ನೀನಿರುವೆ ನಮ್ಮ ಮಾತೆ
ಜಗದ ಜ್ಞಾನದಾತೆ ತಾಯಿ ಶಾರದೆ
ಅಕ್ಷರದಾಹಿನಿ ವಿದ್ಯಾರ್ಥಿ ಮಾತೆ
ಜನರ ಜ್ಞಾನದಾಹ ವಿಧಾತೆ ಶಾರದೆ
ಮನವ ತುಂಬುವ ಕಲ್ಪನ ಶಾರದೆ
ಎದೆಯಭಾವ ಹೊಮ್ಮುವ ಶಾರದೆ
ಕನಸಲಿ ಬರುವ ಕಾವ್ಯ ಮಾತೆ
ಹೃದಯದಲಾಡುವ ಗೀತ ದಾತೆ
ಕವಿ ಬಾಳಿಗೆ ನೀ ಬೆಳಕ ಹೊಂಗಿರಣ
ನಿನಗಾಗಿ ಕಾಯುವೆ ನಾ ಅನುದಿನ
ತಂದಿಹೆ ನೀ ಬದುಕಿಗೆ ಆಶಾಕಿರಣ
ಕಾಣುವೆ ನಾ ಸಾಹಿತಿಯ ಆಗಮನ
-ಬಂದ್ರಳ್ಳಿ ಚಂದ್ರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
