ಮರಗೆಣಸಿನ ಪಲ್ಯ
ಮರಗೆಣಸಿನ ಹೋಳುಗಳು - ೪, ಕೆಂಪು ಮೆಣಸಿನ ಹುಡಿ - ೨ ಚಮಚ, ಅರಸಿನ ಹುಡಿ - ಒಂದು ಚಿಟಿಕೆ, ತೆಂಗಿನ ಕಾಯಿ ತುರಿ - ೪ ಚಮಚ. ಒಗ್ಗರಣೆಗೆ : ಒಣ ಮೆಣಸು, ಸಾಸಿವೆ, ಎಣ್ಣೆ, ಉದ್ದಿನಬೇಳೆ, ಕಡಲೆಬೇಳೆ (ಬೇಕಿದ್ದಲ್ಲಿ ತೊಗರಿಬೇಳೆ), ಕರಿಬೇವು, ರುಚಿಗೆ ಉಪ್ಪು.
ಮರಗೆಣಸಿನ ಸಿಪ್ಪೆ ತೆಗೆದು, ಸ್ವಚ್ಛಗೊಳಿಸಿ, ಚಿಟಿಕೆ ಅರಶಿನ ಹುಡಿ ಸೇರಿಸಿ ಕುದಿಸಬೇಕು. ಒಮ್ಮೆಯ ನೀರನ್ನು ಬಸಿದು, ಒಗ್ಗರಣೆಗೆ ಒಣಮೆಣಸು, ಸಾಸಿವೆ, ಉದ್ದಿನಬೇಳೆ, ಎಣ್ಣೆ ಹಾಕಿ ಒಗ್ಗರಣೆ ಆಗುವಾಗ ಅರಶಿನ, ಕರಿಬೇವು, ಕಾಯಿಮೆಣಸು ಒಂದೆರಡು ಹಾಕಿ, ಬಸಿದ ಹೋಳುಗಳನ್ನು ಸೇರಿಸಿ ಸ್ವಲ್ಪ ಮಿಶ್ರ ಮಾಡಬೇಕು. ಉಪ್ಪು ಖಾರಪುಡಿ ಹಾಕಿ ಸ್ವಲ್ಪ ನೀರು ಚಿಮುಕಿಸಬೇಕು. ತುರಿದ ತೆಂಗಿನಕಾಯಿ ಸ್ವಲ್ಪ ಸೇರಿಸಿ ಮಿಶ್ರ ಮಾಡಿದರೆ ರುಚಿಯಾದ ಪಲ್ಯ ರೆಡಿ.
ಸಾಂಬಾರ್, ಮಜ್ಜಿಗೆಹುಳಿ, ಮಸಾಲೆಪಲ್ಯ, ದೋಸೆ ಸಹ ಮರಗೆಣಸಿನಿಂದ ಮಾಡಬಹುದು. (ಈ ಪಲ್ಯ ಖಾರ ಬೇಕಾದಲ್ಲಿ ಖಾರಪುಡಿ ಜಾಸ್ತಿ ಹಾಕಬಹುದು. ನಮ್ಮ ಮನೆಯ ಸದಸ್ಯರಿಗನುಗುಣವಾಗಿ ತಯಾರಿಸಬೇಕಾಗುತ್ತದೆ.)
ಚಿತ್ರ - ಬರಹ: ರತ್ನಾ ಕೆ.ಭಟ್, ತಲಂಜೇರಿ