ಮರದ ಮಹತ್ವ
ಕವನ
ಮನೆಗೊಂದು ಮರಬೇಕು
ಊರಿಗೊಂದು ವನಬೇಕು
ಮಂಚಕ್ಕೊ ಮರಬೇಕು
ಚಟ್ಟಕ್ಕೊ ಮರಬೇಕು
ಮಂಚದಲ್ಲಿ ಮಲಗಿದರೆ ಚಿಂತೆ
ಚಟ್ಪದಲ್ಲಿ ಮಲಗಿದರೆ ಚಿತೆ
!!ಮನೆಗೊಂದು ಮರಬೇಕು!!
ಅಕ್ಕಿ ಕೆರಲು ಮರಬೇಕು
ಉಸಿರಾಡಲು ಮರಬೇಕು
ಅಕ್ಕಿ ಕೆರಿದರೆ ಆಗುವುದು ಅನ್ನ
ಉಸಿರಾಡಿದರೆ ಉಳಿಯುವುದು ಪ್ರಾಣ
!!ಮನೆಗೊಂದು ಮರಬೇಕು!!
ಒಲೆಯ ಉರಿಸಲು ಮರಬೇಕು
ನೆರಳು ಪಡೆಯಲು ಮರಬೇಕು
ಒಲೆ ಉರಿದರೆ ಆಗುವುದು ಅಡುಗೆ
ನೆರಳು ಪಡೆದರೆ ಕಳೆಯುವುದು ದಣಿದ ಬೇಗೆ
!!ಮನೆಗೊಂದು ಮರಬೇಕು!!
ಮನೆಯ ಕಟ್ಟಲು ಮರಬೇಕು
ಮಳೆಯ ಪಡೆಯಲು ಮರಬೇಕು
ಮನೆಯ ಕಟ್ಟಿದರೆ ದೊರಕುವುದು ರಕ್ಷಣೆ
ಮಳೆಯ ಪಡೆದರೆ ತಣಿಯುವುದು ಈ ಧರಣಿ
!!ಮನೆಗೊಂದು ಮರಬೇಕು!!
ಕುಳಿತುಕೊಳ್ಳಲುಲ ಮರಬೇಕು
ವಿದ್ಯೆಯ ಕಲಿತು ಬರೆಯಲು ಮರಬೇಕು
ಕುಳಿತರೆ ಕಳೆಯುವುದು ಆಯಾಸ
ಬರೆದರೆ ಆಗುವುದು ಬುದ್ಧಿ ವಿಕಾಸ
!!ಮನೆಗೊಂದು ಮರಬೇಕು!!
ಸಕಲಕೂ ಸಕಲರಿಗೂ ಬೇಕು ಈ ಮರ
ಮರದಿಂದಲೇ ಸುಂದರ ಈ ಪರಿಸರ
ಎಲ್ಲದಕ್ಕೂ ಈ ಮರವೇ ಆಧಾರ
ಇದುವೇ ಆ ದೇವರ ನಿರ್ಧಾರ
!!ಮನೆಗೊಂದು ಮರಬೇಕು!!
-ತುಂಬೇನಹಳ್ಳಿ ಕಿರಣ್ ರಾಜು ಎನ್
ಚಿತ್ರ್