ಮರಳಬಾರದೇ ಆ ಸುಂದರ ಬಾಲ್ಯ....
ಕವನ
ಕನಸೊಂದಿತ್ತು ನನಗೆ ಬಾಲ್ಯದಲಿ ಕನಸೊಂದಿತ್ತು
ಯಾರಿಗೆ ಬೇಕೀ ಬಾಲ್ಯ ಬೇಗ ದೊಡ್ದವನಾಗಬೇಕೆಂದು
ಅಪ್ಪನ ಹಾಗೆ ನನಗೂ ಮೀಸೆ ಇರಬೇಕೆಂಬ ಕನಸೊಂದಿತ್ತು
ಅವರ ಹಾಗೆ ಪಂಚೆ ಉಡಬೇಕೆಂಬ ಕನಸೊಂದಿತ್ತು
ಭಗತ್, ಸುಭಾಷರ ಶೌರ್ಯವ ಓದಿ ನಾನು
ಅವರೊಡನೆ ಹೊರಾಡಬೇಕಿತ್ತು ಎಂಬ ಕನಸೊಂದಿತ್ತು
ವಿಜಯನಗರ ಸಾಮ್ರಾಜ್ಯದ ಹಿರಿಮೆಯನ್ನು ಕೇಳಿ
ನಾನು ಅದರ ಒಂದು ಭಾಗವಾಗಬೇಕೆಂಬ ಕನಸೊಂದಿತ್ತು..
ಸೈಕಲ್ ಹೊಡೆಯುವುದ ನೋಡಿ ನಾನು ಬೇಗನೆ
ಸೈಕಲ್ ಕಲಿಯಬೇಕೆಂಬ ಕನಸೊಂದಿತ್ತು
ಬೈಕನ್ನು ನೋಡಿ ಸೈಕಲ್ ಅದರ ಮುಂದೇನು ಇಲ್ಲ
ನಾನು ಬೈಕನ್ನು ಓಡಿಸುವ ಕನಸೊಂದಿತ್ತು
ಸಚಿನ್ ನ ಆಟ ನೋಡಿ ನಾನು ಕ್ರಿಕೆಟ್
ಆಟಗಾರನಾಗಬೇಕೆಂಬ ಕನಸೊಂದಿತ್ತು
ಸಿನಿಮಾ ನಟರ ನೋಡಿ ನಾನು ಸಿನಿಮಾ
ನಟನಾಗಬೇಕೆಂಬ ಕನಸೊಂದಿತ್ತು
ಶಾಲೆಯು ಬೇಗನೆ ಮುಗಿದು ಕಾಲೇಜ್ ಸೇರುವ ಕನಸಿತ್ತು
ಓದುವುದು ಬೋರು ಬಂದು ಕೆಲಸ ಮಾಡುವ ಕನಸಿತ್ತು
ಈಗ ಶುರುವಾಗಿದೆ ಹೊಸದೊಂದು ಕನಸು ನನಗೆ
ಮರಳಬಾರದೇ ಆ ಸುಂದರ ಬಾಲ್ಯ....
Comments
ಉ: ಮರಳಬಾರದೇ ಆ ಸುಂದರ ಬಾಲ್ಯ....
In reply to ಉ: ಮರಳಬಾರದೇ ಆ ಸುಂದರ ಬಾಲ್ಯ.... by Saranga
ಉ: ಮರಳಬಾರದೇ ಆ ಸುಂದರ ಬಾಲ್ಯ....