ಮರಳಿ ಪ್ರಯತ್ನಗಳ ಮಾಡಿ !

ಮರಳಿ ಪ್ರಯತ್ನಗಳ ಮಾಡಿ !

ಅಬ್ರಹಾಂ ಲಿಂಕನ್ ಇದ್ದ ಕೆಲಸವನ್ನು ಕಳೆದುಕೊಂಡ. ವಿಧಾನ ಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ. ವ್ಯಾಪಾರ ಆರಂಭಿಸಿ ಅದರಲ್ಲಿ ನಷ್ಟ ಹೊಂದಿದ. ಪತ್ನಿ ಖಾಯಿಲೆ ಬಿದ್ದು ನಿಧನಳಾದಳು. ನರ ದೌರ್ಬಲ್ಯ ಸಮಸ್ಯೆಗೊಳಗಾದ. ಸ್ಪೀಕರ್ ಹುದ್ದೆಯ ಚುನಾವಣೆಗೆ ನಿಂತು ಸೋತ. ಒಂದು ರಾಜಕೀಯ ಪಕ್ಷದ ಮೂಲಕ‌ ಚುನಾವಣೆಗೆ ಸ್ಪರ್ಧಿಸಿ ಸೋತ. ಲ್ಯಾಂಡ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿದರೂ ಆ ಹುದ್ದೆ ದಕ್ಕಲಿಲ್ಲ. ಸೆನೆಟ್ ಶಾಸನ ಸಭೆಗೆ ಚುನಾವಣೆಯಲ್ಲಿ ಆಯ್ಕೆ ಆಗಲಿಲ್ಲ. ನಾಲ್ಕು ಬಾರಿ ನಿರಂತರವಾಗಿ ಇಲಿನಾಯ್ಸ್ ರಾಜ್ಯದಿಂದ ಶಾಸಕನಾದರೂ ಉಪರಾಷ್ಟ್ರಪತಿ ಪದವಿಗೆ ಸ್ಪರ್ಧಿಸಿ ಸೋತ. ಪುನ: ಸೆನೆಟ್ ಗೆ ಸ್ಪರ್ಧಿಸಿ ಸೋತ.

ಆದರೆ....ಕಟ್ಟಕಡೆಗೆ ಎರಡು ವರ್ಷಗಳ ನಂತರ ಅಮೆರಿಕಾ ಸಂಯುಕ್ತ ಸಂಸ್ಥಾನದ  ೧೬ನೇ ರಾಷ್ಟ್ರಪತಿಯಾಗಿ ಭರ್ಜರಿಯಾಗೇ ಆಯ್ಕೆಯಾದ. ಈ ಮಹಾನ್ ವ್ಯಕ್ತಿ ಕಾನೂನಾತ್ಮಕವಾಗಿ ಅಮೆರಿಕಾದ ೩೦ ಲಕ್ಷ ಮಂದಿಯನ್ನು ಗುಲಾಮಗಿರಿಯ ಜೀತದಿಂದ ಮುಕ್ತಗೊಳಿಸಿದರು. ಪ್ರಜಾಪ್ರಭುತ್ವದ ಆಡಳಿತವೆಂದರೆ ಜನರು ಜನರಿಗಾಗಿ ಮತ್ತು ಜನರಿಂದ ಆಡಳಿತ ಎಂಬುವುದಾಗಿತ್ತು ಇವರ ಬಲವಾದ ನಂಬಿಕೆ ಮತ್ತು ಘೋಷವಾಕ್ಯ. ಈವರೆಗೆ ಆಡಳಿತ ನಡೆಸಿದ ಅಮೆರಿಕಾದ ಅಧ್ಯಕ್ಷರುಗಳ ಪಟ್ಟಿಯಲ್ಲಿ ಕಾರ್ಯವೈಖರಿ-ಜನಪ್ರಿಯತೆಯ ಆಧಾರದ ಮೇಲೆ ಮೊದಲ ಮೂರು ಉತ್ತಮ ಅಧ್ಯಕ್ಷರುಗಳಲ್ಲಿ ಇವರೂ ಒಬ್ಬರು. ಇಂಥ ಅಪರೂಪದ ಪ್ರಾಮಾಣಿಕ, ಸಜ್ಜನ ಆಡಳಿತಗಾರ ಜನನಾಯಕನಿಗೆ ಹ್ಯಾಟ್ಸಾಫ್.

-ವಿಜಿ ಕಾಣಿಚ್ಚಾರ್

ಚಿತ್ರ ಕೃಪೆ: ಇಂಟರ್ನೆಟ್ ತಾಣ