ಮರಳಿ ಬರುವುದೇ ಆ ಸಂಜೆ...??

ಮರಳಿ ಬರುವುದೇ ಆ ಸಂಜೆ...??

ಕವನ

ಅರಸಿ ಅರಸಿ ಓ ನನ್ನ  ಮನದರಸಿ

ಅರಸುತಿದ್ದೆ ನಿನ್ನನ್ನು ನಾನೆಲ್ಲೆಲ್ಲೋ..

ಕಡೆಗೂ ಬಂದೆಯಲ್ಲ ನೀ ನನ್ನನ್ನರಸಿ..

ಅಂದದ ಅರಸಿ ನೀ ರೂಪಸಿ..

 

ನಿನ್ನೊಡನೆ ತಂಗಾಳಿಯಲ್ಲಿ ಕಳೆದ ಆ ಕ್ಷಣ

ಎಂದಿಗೂ ಮರೆಯಲಾರೆನು ಆ ಪ್ರತಿಕ್ಷಣ..

ಎಲ್ಲಿಂದಲೋ ಬೀಸುತಿದ್ದ ಆ ಕುಳಿರ್ಗಾಳಿ..

ಮೈ ಮನ ಸೋಕಿ ಆಗುತಿತ್ತು ಚಳಿ ಚಳಿ..

 

ಮತ್ತೊಮ್ಮೆ ಬರಬಾರದೇ ಆ ಸಂಜೆ..

ನಿನ್ನೊಲವಿನಲ್ಲಿ ಮುಳುಗಿ ಮರೆತಿರುವೆನು

ಎಲ್ಲ ಕಾಲಗಳನ್ನು ಭೂತ, ವರ್ತಮಾನ,ಭವಿಷತ್..

ಮರಳಿ ಬರುವುದೇ ಆ ಸಂಜೆ...??

Comments