ಮರಳಿ ಬಾರದೆ ಹೋಗುತ್ತಿರುವೆಯಲ್ಲಾ..!

ಮರಳಿ ಬಾರದೆ ಹೋಗುತ್ತಿರುವೆಯಲ್ಲಾ..!

ಕವನ
ನಿಲ್ಲು ಎಂದರೂ ನಿಲ್ಲದೆ ಹೋಗುತ್ತಿರುವೆಯಲ್ಲಾ ಅಸಂಖ್ಯ ನೋವು ನಲಿವುಗಳನ್ನು ಕೊಟ್ಟುಹೋಗಿರುವೆಯಲ್ಲಾ ಭಾವನೆಗಳ ಮಹಾಪೂರವನ್ನೇ ಹರಿಸಿಹೋಗಿರುವೆಯಲ್ಲಾ ಪ್ರಕೃತಿಯ ವೈಚಿತ್ರ್ಯಗಳಿಗೆ ಸಾಕ್ಷಿಯಾಗಿಹೋಗಿರುವೆಯಲ್ಲಾ ವಿಸ್ಮಯದ ವಿದ್ಯಮಾನಗಳಿಗೆ ಮೂಕ ಪ್ರೇಕ್ಷಕಳಾಗಿದ್ದೆಯಲ್ಲಾ ಕಾಲಗರ್ಭದಲ್ಲಿ ನಿನ್ಹೆಸರನ್ನ ಬರೆದು ಮೌನವಾಗಿ ಸಾಗುತ್ತಿರುವೆಯಲ್ಲಾ ಮರೆಯದ ನೆನಪುಗಳಿಗೆ ಸಾಕ್ಷಿಯಾಗಿರುವೆಯಲ್ಲಾ ಕಾಲದ ಸೆಳೆತಕೆ ಸಿಲುಕಿ ಸದ್ದಿಲ್ಲದೆ ಸರಿಯುತ್ತಿರುವೆಯಲ್ಲಾ ನಿನ್ನ ನೆನಪುಗಳ ಮೆರವಣಿಗೆಯಲ್ಲಿ ಸಾಗುತ್ತಿರುವೆವು ನಾವೆಲ್ಲಾ ಹೊಸ ಹೆಜ್ಜೆ ಹೊಸ ಕನಸುಗಳಿಗೆ ಕಾತರರಾಗಿರುವೆವೆಲ್ಲಾ

Comments