ಮರಳಿ ಬಾ ಕಾಲವೇ .......
ಏನೋ ಗೊತ್ತಿಲ್ಲ ೫ ನಿಮಿಷ ಟೈಮ್ ಸಿಕ್ಕರೂ ಮನಸ್ಸು ಹಿಂದೆ ಓಡುತ್ತೆ .ಎಲ್ಲೋ ನಾ ಕಳೆದ ಬಾಲ್ಯ ಧುತ್ತನೆ ಕಣ್ಮುಂದೆ ಬರುತ್ತೆ. ಇವಾಗಿನ ನನ್ನ ಸ್ಥಿತಿ ನೋಡಿ ಅಣಕಿಸಿದಂತೆ ಆಗುತ್ತೆ. ಎಲ್ಲಿ ಹೋಯ್ತು ಆ ದಿನಗಳು . .......?ಮನಸಾರೆ ನಕ್ಕು ತುಂಬ ದಿನಾನೇ ಆಗೋಯ್ತು .
ದಿನ ಓಡ್ತಿದೆ ಅದರ ಕಾಲಿಗೆ ಕಟ್ಟಿಕೊಡವಳ ಹಾಗೆ ನಾನು ಓಡ್ತಿತಿದೇನೆ.ಬೇಡದ ಜಂಜಾಟಗಳೊಂದಿಗೆ ನಾನೆಲ್ಲೋ ಕಳೆದು ಹೋಗ್ತಿದ್ದೇನೆ ಅನಿಸ್ತಿದೆ. ಅಳುವುದಕ್ಕೂ ಟೈಮ್ ಇಲ್ಲ. ನನ್ನೊಳಗೆ ನಾನು ಮಾತನಾಡದೆ ಎಷ್ಟೋ ಕಾಲ ಆಗಿದೆ.
ಎಷ್ಟು ವಿಚಿತ್ರ ಅಲ್ವಾ ನಾವು ...... ಕೈಲೊಂದು ಮೊಬೈಲ್ ಎದ್ರುಗಡೆ ಕಂಪ್ಯೂಟರ್ ಇದ್ದರೆ ಸಾಕು ಪ್ರಪಂಚಾನೇ ಮರೆತು ಬಿಡ್ತಿವಿ. ಅದೂ ಸಾಲದೆ ಲವ್ ಮಾಡ್ದೆ ಇದ್ದರೆ ಲೈಫ್ ಇಲ್ಲ ಅನ್ನುವ ಹಾಗೇ ವರ್ತಿಸ್ತಿವಿ.ಇದ್ದೆಲ್ಲ ಯಾಕೆ ಬೇಕು ಈ ಹುಚ್ಚು ಮನಸ್ಸಿಗೆ........? ಕೆಲವೊಂದು ಪ್ರಶ್ನೆಗಳಿಗೆ ಉತ್ರಾನೆ ಯಾಕಿಲ್ಲ .....? ಅಥವಾ ನಾನ್ ಹುಡುಕ್ತಾ ಇರೋ ದಾರಿನೇ ಸರಿ ಇಲ್ವಾ.......?
ಪುನ: ನನಗೆ ನನ್ನ ಬಾಲ್ಯ ಬೇಕನಿಸ್ತಿದೆ. ಅಮ್ಮ ನ ಸೆರಗಿನ ಹಿಂದೆ ಗುಬ್ಬಿ ಮರಿಯ ಹಾಗೇ ಅಡಗಿಕೊಂಡಿದ್ದು, ತಮ್ಮನ ಜೊತೆ ಪ್ರೀತಿ ತುಂಬಿದ ಜಗಳ , ರಾತ್ರಿ ಮಲಗುವಾಗ ಅಜ್ಜಿ ಹೇಳ್ತಿದ್ದ ಕತೆ , ಹಾಗೇ ಅವಳ ಕಾಲ ಮೇಲೆ ನಿದ್ದೆ ಹೋಗ್ತಿರೋದು. ಪ್ರೀತಿ ತುಂಬಿದ ಹೆದರಿಕೆಯೊಂದಿಗೆ ಅಪ್ಪನಿಗಾಗಿ ಕಾಯ್ತಾ ಇರೋದು,ಆಜ್ಜ ತರುವ ೫ ಪೈಸೆಯ ಆ ಚಿಕ್ಕ ಬಿಸ್ಕೆಟ್ಗೆ ಬೆಲೆ ಕಟ್ಟೋಕೆ ಆಗ್ತದಾ .....?
ಆಗ ಮನಸ್ಸಿನಲ್ಲಿ ಒಂದು ಮುಗ್ದತೆಯಿತ್ತು. ಈಗ ಆ ಜಾಗದಲ್ಲಿ ಸ್ವಲ್ಪ ಮಟ್ಟಿನ ಕ್ರೂರತೆ ,ಸ್ವಾರ್ಥತೆ ತುಂಬಿಕೊಂಡಿದೆ. ಚಿಕ್ಕ ಚಿಕ್ಕ ವಿಷ್ಯದಲ್ಲಿ ಸಂತೋಷ ಪಡ್ತಿದ್ದ ಮನ ಈಗ ಮತ್ತಷ್ಟೂ ಬೇಕು ಅನಿಸುವಷ್ಟರ ಮಟ್ಟಿಗೆ ಹೋಗಿ ಕುಳಿತಿದೆ. ಹುಚ್ಚು ಆಸೆಗಳಿಗೆ ಮನ ಜೋತು ಬಿದ್ದಿದೆ.ಮನಸ್ಸಿನಲ್ಲಿ ಪ್ರೀತಿ ಬತ್ತಿ ಹೋಗ್ತಿದೆ. ಯಾಕೆ ಹೀಗೆ .......?ಇಲ್ಲೂ ಅಷ್ಟೆ ನನ್ನಲ್ಲಿ ಉತ್ತರ ಇಲ್ಲ. ಇದೆಲ್ಲ ನನ್ನ ಮನದ ಗೊಂದಲಗಳು. ಉಳಿದವರಿಗೆ ಇದು ಗೋಜಲು ಅನಿಸಬಹುದು. ಮತ್ತೊಮ್ಮೆ ಮಗುವಾಗುವ ಆಸೆ. ಆ ಮುಗ್ದತೆ ನನಗೆ ಬೇಕು.ಸ್ವಾರ್ಥ ಇಲ್ಲದ ಆ ನಗು ಬೇಕು ಅನಿಸ್ತಿದೆ. ಆದ್ರೆ ಇದೆಲ್ಲ ಈ ಸಿಲಿಕಾನ್ ಜನರಿಗೆ ಯಾಕೆ ಅರ್ಥ ಆಗಲ್ಲ.
Comments
ಉ: ಮರಳಿ ಬಾ ಕಾಲವೇ .......
In reply to ಉ: ಮರಳಿ ಬಾ ಕಾಲವೇ ....... by abdul
ಉ: ಮರಳಿ ಬಾ ಕಾಲವೇ .......
ಉ: ಮರಳಿ ಬಾ ಕಾಲವೇ .......
In reply to ಉ: ಮರಳಿ ಬಾ ಕಾಲವೇ ....... by asuhegde
ಉ: ಮರಳಿ ಬಾ ಕಾಲವೇ .......