ಮರುನೆನಪಿನಲಿ

ಮರುನೆನಪಿನಲಿ

ಬರಹ

ಅತಿ ಪುರಸ್ಕೃತ ಶ್ರೀಮತಿ ಅರ್ಚನಾ ಮಾನ್ಯವತಿ
ನಿಮ್ಮೂರಿನ ಕಾವ್ಯವತಿ ಸೌಜನ್ಯವತಿ ಅಚ್ಚಭಾರತಿ,
ವರುಷದಿಂದೆ ಶ್ಲಾಘನಾರ್ಹವೆಂದು ಸಲಹೆ ಮಾಡಿ
ಪ್ರಕಟಿಸಲು ಸೂಚನೆ ನೀಡಿ ಮೆಚ್ಚಿನ ನುಡಿ ಆಡಿ.
*
ಮರುನೆನಪಿನಲಿ

ದಶವರುಷಗಳ್ಹಿಂದೆ ದಡಬಡ ದಿಕ್ಹಿಡಿದು ಹೋದೆ
ವಿಶಿಷ್ಟ ವಿದೇಶಕೆ ಪರಭಾಷೆಯ ಬೀಡಿಗೆ
ಮನೆಬೀಡು ಬಿಟ್ಟು ಮಾತೃಸಂಸ್ಕೃತಿ ಮರೆತಿದೆ
ನವಾಚಾರಗಳ ಉದಿತಕಾಲ ತಾಯ್ನಾಡಿಗೆ.

ಕುಶಲೋಪರಿ ಸಂಪ್ರದಾಯಗಳು ಕಳೆದ ಕಾಲ
ವಿಶಾಲತೆಯೊ ವಿಧಿವಶವೊ ವೃದ್ಧಿಯ ಗದ್ದಲ
ಮಾತುಮಾತಿಗೆ ಕಂಗ್ಲಿಷ್ ಆಡಿ ’ಹೈ’ ಎನುವರು
ಕನ್ನಡ ನಾಡಲಿ ಸವಿಗನ್ನಡ ’ಮೈ’ಮುರಿಯುತವರು!

ತದ್ಕಾರಣ ಹಿಂಜರಿಕೆ! ಎನಬಹುದೆ ’ಶ್ರೀಮತಿ’?
ನವಯುಗದಲಿ ಸಾಹಿತ್ಯ ಲೋಗದಲಿ ಸ್ತ್ರೀಕುಲಕೆ
ಸನ್ಮಾನ ಸ್ಥಾನ ಸರಿಸಮಾನ! ಆತ್ಮೀಯ ನಮಿಸುವ ರೀತಿ,
ಸೌಶೀಲ ಕುಲ ವಿಪುಲ ಕುಶಲಕಲೆಯ ಚತುರರಿಗೆ!

ಪತ್ರವ್ಯವಹಾರದ ಹಾದಿ ಒಂದಕ್ಕೂ ಬಹುವಾದದ್ದು
ಸಂಬಂಧಿಗಳಲಿ ಪ್ರೇಮಪ್ರಿಯರಲಿ ವಿವಿಧರೂಪ
ರಾಜಕೀಯದಲಿ, ವಾಣಿಜ್ಯದಲಿ, ವೈವಿಧ್ಯ ಉಳಿದದ್ದು,
ಎಲ್ಲಕ್ಕೂ ಮೇಲಾದದ್ದು ಕವಿಗಳ ಲೇಖನಪತ್ರಸ್ವರೂಪ!

ಹಿಂಜರಿಕೆ ಹಿಂದಿಟ್ಟು ಈನಾಡ ಮುಂಜರಿಕೆ ಪ್ರಕಾರ
ವಿಜಯನಾಗಿ ಪ್ರವರ್ದಮಾನದ ನಂಬಿಕೆ ನಮಸ್ಕಾರ
ಪ್ರಬುದ್ಧ ಪಥದಲಿ ಬದ್ಧ ರೀತಿಯಲಿ ಆತ್ಮೀಯವಾಗಿ
ಪುನರುಕ್ತಿ ಪಂಕ್ತಿಯಲಿ ಬರೆಯುವೆ ತೂಗಿ ನಿಮಗಾಗಿ!

- ವಿಜಯಶೀಲ

*
[ಪತ್ರ ಕವನ ಮಾಲಿಕೆ]