ಮರುಳುಗೊಳಿಸಿದ ಮರಳುಶಿಲ್ಪ

ಮರುಳುಗೊಳಿಸಿದ ಮರಳುಶಿಲ್ಪ

ಕವನ

ಮರಳಿನಲಿ ಕೃತಿಯೊಂದು ರಚಿಸಿದವ ಯಾರಿವನು

ಮರಳಾಗಿ ನಿಂತಿರುವೆ ನೋಡುತಿದನು

ತಂಗಾಳಿ ಬೀಸುತಿರೆ ಮೈಯೊಡ್ಡಿ ನಿಂತಿರುವ

ತರುಣಿಯದು  ಉಡುಪೀಗ ಮೈಗಂಟಿದೆ

 

ಮಾರುತಕೆ ಎದುರಾಗಿ ಮೊಗತಿರುವಿ ನಿಂತಿರುವ

ಮಾನಿನಿಯ ಉಬ್ಬುಗಳ ತಾ ತೋರಿದೆ

ನಯನಗಳು ನಾಸಿಕವು ನಗುತಿರುವ ಅಧರಗಳು

ಸ್ಪಷ್ಟತೆಯು ನೋಡಿಲ್ಲಿ ಗೋಚರಿಸಿದೆ

 

ಕಿವಿಯಲ್ಲಿ ಓಲೆಗಳು ಕೆದರಿರುವ ಕೂದಲಿದೆ

ಕೃತಿಕಾರ ಕೈಚಳಕ ಮೈತಳೆದಿದೆ

ಮರಳುಶಿಲ್ಪವಿದೆಂದು ಹೀಗಳೆಯದಿರು ನೀನು

ಸುಲಭವೇನಲ್ಲ ರಚಿಸಲಿದನು||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್