ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ

ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ

ಬರಹ

ಮರೆಯದಿರಿ ಕಸ್ತೂರಿ ಕನ್ನಡವ -ರಘೋತ್ತಮ್ ಕೊಪ್ಪರ

ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ತಮಗೆಲ್ಲರಿಗು. ನವೆಂಬರ್ ಮೊದಲನೆ ದಿನ ಹತ್ತಿರ ಬರುತ್ತಿದ್ದಂತೆ ಕನ್ನಡ ಬಾವುಟ ಹಾರಿಸುವುದಕ್ಕೆ ನಾವೆಲ್ಲ ಉತ್ಸುಕರಾಗಿರುತ್ತೇವೆ. ಆ ದಿನ ಕನ್ನಡಾಂಬೆಯ ಹಾಡುಗಳು, ಅಣ್ಣಾವ್ರ ಹಾಡುಗಳು ಎಲ್ಲೆಲ್ಲಿಯೂ ಕೇಳಿಬರುತ್ತಿರುತ್ತವೆ. ಇಷ್ಟೆಲ್ಲ ಸಂತೋಷ ಒಂದೆಡೆ. ಇನ್ನೊಂದೆಡೆ ನಮ್ಮನ್ನು ಎಷ್ಟು ರೀತಿ ಒಡೆಯುತ್ತಿದ್ದಾರೆ ಎಂಬ ಭೀತಿ. ಜಾತಿ, ಉಪಜಾತಿ, ಪಕ್ಷ, ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಹೀಗೆ ಹತ್ತು ಹಲವು ರೀತಿಯಲ್ಲಿ ನಮ್ಮನ್ನು ಒಡೆಯುತ್ತಿದ್ದರೂ ನಾವು ಸುಮ್ಮನೆ ಕುಳಿತಿದ್ದೇವೆ. ಬೆಂಗಳೂರಿನಲ್ಲಿ ಅನ್ಯ ಭಾಷೆಯ ಜನ ಕಿಕ್ಕಿರಿದು ಬರುತ್ತಿದ್ದಾರೆ. ಅವರೊಂದಿಗೆ ನಾವು ಕನ್ನಡವನ್ನು ಬಿಟ್ಟು ಬೇರೆ ಭಾಷೆಯನ್ನೇ ಮಾತಾಡಬೇಕಾಗಿದೆ. ಕನ್ನಡಿಗರು ಬೇರೆ ರಾಜ್ಯಗಳಿಗೆ ಹೋದಾಗ ಆ ಭಾಷೆಯನ್ನು ಕಲಿಯಲು ಯತ್ನಿಸುತ್ತಾರೆ. ಆದರೆ ಬೆಂಗಳೂರಿನಲ್ಲಿರುವ ಬಹಳಷ್ಟು ಅನ್ಯ ಭಾಷಿಗರು ಕಲಿಯಲು ಯತ್ನಿಸಿಲ್ಲ ಎಂಬುದೇ ವಿಷಾದದ ಸಂಗತಿ. ಅಷ್ಟೆ ಅಲ್ಲ ಅವರು ಕಲಿಯಲಿಲ್ಲ ಇರಲಿ, ಆದರೆ ಕನ್ನಡಿಗರೆ ಅವರ ಭಾಷೆ ಕಲಿಯಲು ಇಚ್ಛಿಸುತ್ತಿದ್ದಾರಲ್ಲ ಏನು ಹೇಳಬೇಕು ಇವರಿಗೆ. ಮಿತ್ರರೇ ನೀವು ಯಾವುದೇ ಸಂಸ್ಠೆಯಲ್ಲಿ ಕೆಲಸಮಾಡುತ್ತಿದ್ದರೂ ಅಲ್ಲಿರುವ ಕನ್ನಡಿಗರ ಜತೆಗೆ ಕನ್ನಡವನ್ನು ಮಾತನಾಡಿ. ಕನ್ನಡದಲ್ಲಿ ಇ-ಮೇಲ್ ಕಳಿಸಿ. ಕನ್ನಡದಲ್ಲೇ ಶುಭ ಹಾರೈಸಿ. ಬೇರೆ ಭಾಷೆಯವರಿಗೂ ಕನ್ನಡವನ್ನು ಕಲಿಸಿ. ನಮ್ಮ ರಾಜಕಾರಣಿಗಳಿಗಂತೂ ಸಮಯವೇ ಇಲ್ಲ. ಹಸ್ತಾಂತರದ ಅವಾಂತರದಲ್ಲಿ ಎಲ್ಲವನ್ನು ಮರೆತಿದ್ದಾರೆ. ಆದರೆ ನಾವು ಮರೆಯಲು ಸಾಧ್ಯವೇ. ಜೈ ಕರ್ನಾಟಕ ಮಾತೆ.
ರಘೋತ್ತಮ್ ಕೊಪ್ಪರ