ಮರೆಯಬೇಡ..........™
ಮರೆಯಬೇಡ..........™
ರೆಕ್ಕೆಗಳಲ್ಲಿ ಬಲವಿದೆಯೆಂದು
ಆಕಾಶದಲ್ಲಿ ಜೋರಾಗಿ ಹಾರಾಡುವಾಗ
ಭೂಮಿಯಲ್ಲಿದ್ದಾಗಿನ ಕಾಲಿನ ಬಲವನ್ನು ಮರೆಯಬೇಡ...
ಭವಿಷ್ಯಕಾಲದ ಪ್ರಕಾಶಮಾನವಾದ ಸ್ವಪ್ನ ನೋಡುವಾಗ
ಭೂತಕಾಲದ ಕತ್ತಲೆಯ ಕರಾಳದಿನಗಳನ್ನು ಮರೆಯಬೇಡ...
ತಪ್ಪನ್ನು ಸರಿಪಡಿಸುತ್ತಾ ಮನುಷ್ಯ ಜೀವನ ಕಳೆಯುತಿರುತ್ತದೆ
ಇದನ್ನು ನೀ ಮರೆಯಬೇಡ...
ಜೀವನದಲ್ಲಿ ಒಬ್ಬ ಪ್ರೀತಿಯ ವ್ಯಕ್ತಿಯನ್ನು ಕಳೆದುಕೊಂಡರೆ
ಆಳುತ್ತಾ ಸಮಯ ಕಳೆಯಬಾರದು...
ಆ ವ್ಯಕ್ತಿಯ ಒಟ್ಟಿಗೆ ಕಳೆದ ಆನಂದದ ಕ್ಷಣಗಳನ್ನು
ನೆನಪಿಸುತ್ತಾ ಜೀವನವನ್ನು ಆನಂದದಿಂದ ಕಳೆಯಬಹುದು..
ನಮ್ಮ ಈ ಜೀವನವೆಂದರೆ ಸದಾ ಹರಿಯುವ ಝರಿಯಂತಿರಬೇಕು
ಅದರ ಜರಿಯು ಸದಾ ಜುಲು-ಜುಲು ಅನ್ನುತಿರಬೇಕಾದರೆ
ತನ್ನಲ್ಲಿಗೆ ಹರಿಯ ಬರುವ ನೀರನ್ನು ಮರೆಯಬೇಡ...
ಜೀವನದಲ್ಲಿ ಅಪಜಯವಾಯಿತೆಂದು
ಆ ಅಪಜಯದ ಕೊಚ್ಚಿನಲ್ಲಿ ಕೊಚ್ಚಿಹೋಗಬೇಡ
ಪ್ರತಿಯೊಂದು ಅಪಜಯವು ಯಶಸ್ಸುವಿನ ಮೆಟ್ಟಿಲು ಎಂಬುವುದ ಮರೆಯಬೇಡ...
ಅಪಜಯದ ಮೆಟ್ಟಿಲು ಹತ್ತುತಿರುವಾಗ
ನಿರುತ್ಸಹಿಗಳಾಗುವುದು ಬೇಡ
ಪ್ರತಿಯೊಂದು ಮೆಟ್ಟಿಲು ಮೇಲೆರುವಾಗ ಯಶಸ್ಸುವಿನ ಆ
ಗೋಪುರವನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದ ಮರೆಯಬೇಡ....
(ಇದನ್ನು ಮುಂದುವರಿಸಲು ಮನಸ್ಸಿದ್ದರೆ...ಮುಂದುವರಿಸಿ ......"(ನಿಮ್ಮ ಮನಸ್ಸಿನ ಭಾವನೆಗಳ ಹೊಳೆಯನ್ನು ಹರಿಸಿ......))
: "ಪ್ರಸಾದ್ ಬಿ ಶೆಟ್ಟಿ"
prasaad®