ಮರೆಯಲು ಆಸ್ಪದ ಕೊಡಬೇಡಿ

ಮರೆಯಲು ಆಸ್ಪದ ಕೊಡಬೇಡಿ

ಕವನ


ಒಂದು

ವೇಳೆ ನನಗೆ ಅದೃಷ್ಟವಿಲ್ಲದೊಡೆ
ನಿನ್ನನ್ನು ಜೀವನದಲ್ಲಿ ಭೇಟಿಯಾಗಲು
ನಿನ್ನ ನೋಡಲು ಆಗಲಿಲ್ಲವೆಂಬ ಭಾವನೆ ನನ್ನಲ್ಲಿ ಆಗಲಿ
...
ಕ್ಷಣದಲ್ಲಿ ಮರೆಯಲು ಆಸ್ಪದ ಕೊಡಬೇಡ
ನನ್ನ ಕನಸುಗಳಲ್ಲಿ ಹಾಗೂ ಜಾಗೃತಾವಧಿಯಲ್ಲಿ ನೋವಿನ
ಮೂಟೆಯನ್ನು ಹೊರಲು ಆಸ್ಪದ ಕೊಡು

ದಟ್ಟಣೆಯಿಂದ ಕೂಡಿದ ಜೀವನ ಸಂತೆಯಲ್ಲಿ
ನನ್ನ ದಿನಗಳು ಮುಗಿಯುತ್ತಿದೆ ಮತ್ತು
ನನ್ನ ಕೈಯಲ್ಲಿ ತುಂಬಿದೆ ದಿನದ ವಹಿವಾಟಿನ ಲಾಭದ ಗಳಿಕೆ
ನನಗೆಂದೂ ಅನಿಸದೇಯಿರಲಿ ನಾನೇನನ್ನೂ ಗಳಿಸಲಿಲ್ಲವೆಂದು
...
ಕ್ಷಣದಲ್ಲಿ ಮರೆಯಲು ಆಸ್ಪದ ಕೊಡಬೇಡ
ನನ್ನ ಕನಸುಗಳಲ್ಲಿ ಹಾಗೂ ಜಾಗೃತಾವಧಿಯಲ್ಲಿ ನೋವಿನ
ಮೂಟೆಯನ್ನು ಹೊರಲು ಆಸ್ಪದ ಕೊಡು

ನಾನು ಯಾವಾಗ ಏದುಸಿರುಬಿಡುತ್ತಾ ಸುಸ್ತಾಗಿ
ರಸ್ತೆಬದಿಯಲ್ಲಿ ಕುಳಿತಿರಲು, ಮಣ್ಣಿನ ಧೂಳಿನ ಕೆಳಸ್ತರದಲ್ಲಿ
ನನ್ನ ಹಾಸಿಗೆ ಹಾಸಿರಲು
ನನಗನಿಸಲಿ ಇನ್ನೂ ಬಹಳ ದೂರದ ದಾರಿಯ ಪಯಣ ಬಾಕಿಯಿದೆಯೆಂದು
...
ಕ್ಷಣದಲ್ಲಿ ಮರೆಯಲು ಆಸ್ಪದ ಕೊಡಬೇಡ
ನನ್ನ ಕನಸುಗಳಲ್ಲಿ ಹಾಗೂ ಜಾಗೃತಾವಧಿಯಲ್ಲಿ ನೋವಿನ
ಮೂಟೆಯನ್ನು ಹೊರಲು ಆಸ್ಪದ ಕೊಡು

ಯಾವಾಗ ನನ್ನ ಕೋಣೆಯನ್ನು ಶೃಂಗಾರ ಮಾಡಿರಲಾಗಿ
ಮತ್ತು ಕೊಳಲ ದನಿ ಹಾಗೂ ನಗುವಿನ ಸಪ್ಪಳ ತುಂಬಿರಲು
ನನಗೆ ಅನಿಸಲಿ ನಾನು ಯಾರನ್ನೂ ನನ್ನ ಮನೆಗೆ ಆಹ್ವಾನಿಸಿಲ್ಲವೆಂದು
...
ಕ್ಷಣದಲ್ಲಿ ಮರೆಯಲು ಆಸ್ಪದ ಕೊಡಬೇಡ
ನನ್ನ ಕನಸುಗಳಲ್ಲಿ ಹಾಗೂ ಜಾಗೃತಾವಧಿಯಲ್ಲಿ ನೋವಿನ
ಮೂಟೆಯನ್ನು ಹೊರಲು ಆಸ್ಪದ ಕೊಡು
ಪ್ರೇರಣೆ: Let me not forget by Rabindranath Tagore